

ಉಡುಪಿ: ಟಗರು, ಬುಲ್, ಕೋಳಿ ಕಾಳಗ ನೋಡದವರಿಲ್ಲ. ಇನ್ನು ವಯ್ಯಾರಕ್ಕೆ ಹೆಸರಾದ ನವಿಲಿನ ಫೈಟ್ ಕಂಡಿದ್ದೀರಾ? ಅದೂ ಕೋಳಿಹುಂಜದ ಜತೆ?
ಗುಂಪು ಕಟ್ಟಿಕೊಂಡು ಹೆಣ್ಣುಕೋಳಿ ಸುತ್ತ ಗಿರಕಿ ಹೊಡೆಯುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಮತ್ತೊಂದು ಹುಂಜದ ಜೊತೆಗೆ ಫೈಟ್ ಮಾಡೋದನ್ನ ಬಿಟ್ಟು ನವಿಲಿನ ವಿರುದ್ಧ ಕಾದಟಕ್ಕಿಳಿದಿತ್ತು. ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣುನವಿಲುನ್ನು ರಮಿಸುವುದರಲ್ಲಿ ಬಿಜಿಯಾಗುವ ಮಯೂರ ಕೂಡ, ನರ್ತನ ಬಿಟ್ಟು ಕುಕ್ಕುಟದ ಜತೆ ಕಾದಾಡುವುದರಲ್ಲೇ ಮೈ ಮರೆತಿತ್ತು. ಅಂದಹಾಗೆ ಈ ದೃಶ್ಯ ಸಂಭವಿಸಿದ್ದು ಎಲ್ಲಿ ಗೊತ್ತಾ?
ಕುಂದಾಪುರ ಭಾಗದ ವ್ಯಕ್ತಿಯೊಬ್ಬರ ಮನೆ ಮುಂದೆ ನವಿಲು-ಕೋಳಿ ಕಾಳಗ ನಡೆದಿದ್ದು, ಸ್ಥಳೀಯರು ಆಶ್ಚರ್ಯಚಕಿತರಾಗಿ ಈ ದೃಶ್ಯವನ್ನು ಕಣ್ತುಂಬಿಕೊಂಡರು. ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆ ಕಾದಾಡಿದ ಹುಂಜನಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಈ ವಿಡಿಯೋ ಸಖತ್ ವೈರಲ್ ಆಗಿದೆ.