VIDEO: ಹೊತ್ತಿ ಉರಿಯುತ್ತಿದ್ದ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಹಾರಿದ ಇಬ್ಬರು ಮಕ್ಕಳು; ಮುಂದೇನಾಯ್ತು ನೋಡಿ

Photo
Published on

ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಇಬ್ಬರು ಸಹೋದರರು ಕೆಳಕ್ಕೆ ಹಾರುವ ಒಂದು ಭಯಾನಕ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗುತ್ತಿದೆ.

ಆ ಅಪಾರ್ಟ್​ಮೆಂಟ್​​ನ ಒಂದು ಭಾಗ ಬೆಂಕಿಯಿಂದ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದೆ. ಕಿಟಕಿಗಳಿಂದ ಕಪ್ಪನೆಯ ದಟ್ಟ ಹೊಗೆ ಬರುತ್ತಿದೆ. ಒಂದು ಮನೆಯಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಚಿಕ್ಕ ಬಾಲಕರು ಕಿಟಿಕಿಯಿಂದಲೆ ಕೆಳಕ್ಕೆ ಹಾರುತ್ತಾರೆ. ಆದರೆ ಅವರಿಗೆ ಏನೂ ಅಪಾಯವಾಗದಂತೆ ಕೆಳಕ್ಕೆ ನಿಂತವರು ಅವರಿಬ್ಬರನ್ನೂ ಹಿಡಿಯುತ್ತಾರೆ.

ಇದು ಫ್ರೆಂಚ್ ಸಿಟಿಯ ಗ್ರೆನೋಬಲ್​ ಎಂಬಲ್ಲಿ ನಡೆದ ಘಟನೆ. ಕಿಟಕಿಯಿಂದ ಕೆಳಕ್ಕೆ ಹಾರಿ ಬಚಾವಾದ ಬಾಲಕರಲ್ಲಿ ಒಬ್ಬನಿಗೆ 10 ವರ್ಷ. ಇನ್ನೊಬ್ಬನಿಗೆ 3ವರ್ಷ ಎಂದು ಹೇಳಲಾಗಿದೆ.

ಮೊದಲು ಮೂರುವರ್ಷದ ಮಗು ಕಿಟಕಿಯಿಂದ ಹಾರುತ್ತದೆ. ಅವನನ್ನು ಕೆಳಗಿದ್ದವರು ಹಿಡಿದುಕೊಳ್ಳುತ್ತಾರೆ. ಅದಾದ ಬಳಿಕ ಅವನ ಅಣ್ಣ 10 ವರ್ಷದ ಬಾಲಕ ಜಂಪ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಪಾರ್ಟ್​ಮೆಂಟ್​ನ ಮೂರನೇ ಅಂತಸ್ತಿನಲ್ಲಿದ್ದ ಈ ಮಕ್ಕಳು ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಹೊಗೆಯಿಂದ ಉಸಿರು ಕಟ್ಟಿ ಒದ್ದಾಡುತ್ತಿದ್ದರು. ಅವರಿಗೆ ಧೈರ್ಯ ತುಂಬಿ ಕೆಳಕ್ಕೆ ಹಾರುವಂತೆ ಹೇಳಲಾಯಿತು. ಇವರನ್ನು ರಕ್ಷಿಸುವ ವೇಳೆ ಕ್ಯಾಚ್​ ಹಿಡಿದ ಓರ್ವನ ಮೊಣಕೈ ಮುರಿದಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫ್ರೆಂಚ್​ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net