ಆ ಸಿನಿಮಾದ ಬಳಿಕ 1 ತಿಂಗಳು ಕಷ್ಟವಾಗಿತ್ತು; 2-3 ದಿನ ರೂಮ್​ನಲ್ಲಿ ಕುಳಿತು ಅಳುತ್ತಿದೆ ಎಂದ Triptii Dimri

Untitled-design-2024-10-09T152720.387-1
Published on

ಮುಂಬೈ: ತೃಪ್ತಿ ದಿಮ್ರಿ ಪೋಸ್ಟರ್​ ಬಾಯ್ಸ್​​ ಸಿನಿಮಾದ ಮೂಲಕ 2017ರಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. ಅನಿಮಲ್​​ ಸಿನಿಮಾದಲ್ಲಿನ ಅತಿಥಿ ಪಾತ್ರದಿಂದಾಗಿ ರಾತ್ರೋರಾತ್ರಿ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡರು. ಜೋಯಾ ಪಾತ್ರದ ಮೂಲಕ ಜನಪ್ರಿಯರಾದರು ಅವರ ಬೋಲ್ಡ್​ ಪಾತ್ರಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.

ಇತ್ತೀಚಿನ ಸಂದರ್ಶನವೊಂದರಲ್ಲಿ ತೃಪ್ತಿ ದಿಮ್ರಿ ಅವರು ಸಿನಿಮಾರಂಗದಲ್ಲಿನ ತಮ್ಮ ಹೋರಾಟ, ಖ್ಯಾತಿ ಮತ್ತು ಟ್ರೋಲಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನಿಮಲ್​​ ಯಶಸ್ತಿನ ನಂತರ ನಾನು ತುಂಬಾ ಸಂತೋಷಪಟ್ಟೆ. ನನ್ನನ್ನು ಗುರುತಿಸಲು ಪ್ರಾರಂಭಿಸಿದರು, ಇಂಟರ್​​ವ್ಯ್ಯೂಗಳು ಆಗುತಿತ್ತು, ಕೆಲಸ ಸಿಗುತಿತ್ತು ಇದೆಲ್ಲಾವು ನನ್ನ ಸಂತೋಷಕ್ಕೆ ಕಾರಣವಾಯಿತು. ಆದರೆ ಸಿನಿಮಾದಲ್ಲಿನ ಬೋಲ್ಡ್​ ದೃಶ್ಯಗಳಿಗೆ ಜನರ ಮಾಡಿದ ನೆಗೆಟಿವ್​​​ ಕಾಮೆಂಟ್​​ಗಳತ್ತ ನನ್ನ ಗಮನ ಹೋದಾಗ ಆಗಿದ ಅನುಭವವೇ ಬೇರೆ ಎಂದು ಹೇಳಿದ್ದಾರೆ.

ಪೋಸ್ಟರ್ ಬಾಯ್ಸ್, 'ಲೈಲಾ ಮಜ್ನು', 'ಬಲ್ಬುಲ್' ಮತ್ತು 'ಕಾಲಾ' ಸಿನಿಮಾಗಳಲ್ಲಿ ನಟಿಸಿದ ಬಳಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭಾವಿಸುತ್ತಿದೆ. ಆ ಸಮಯದಲ್ಲಿ ಕಾಮೆಂಟ್​ಗಳನ್ನು ಓದುತ್ತಿದ್ದೆ, ಜನರು ಒಳ್ಳೆಯದನ್ನು ಮಾತ್ರ ಬರೆಯುತ್ತಾರೆ ಎಂದು ತಿಳಿದಿದ್ದೆ. ಆದರೆ ಅನಿಮಲ್​ ಸಿನಿಮಾ ಬಿಡುಗಡೆಯಾದ ಬಳಿಕ ನನ್ನ ಪಾತ್ರವನ್ನು ನೋಡಿ ಜನರು ನೆಗೆಟಿವ್​ ಕಾಮೆಂಟ್​ ಮಾಡುತ್ತಿದ್ದರು.

ನನಗೆ ಈ ಅಭ್ಯಾಸವೇ ಇರಲಿಲ್ಲ, ಇದು ಇದ್ದಕ್ಕಿದ್ದಂತೆ ಸಂಭವಿಸಿತು. ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಹಾಗೂ ಈ ಟೀಕೆಗಳನ್ನು ಹೇಗೆ ಎದುರಿಸುವುದು ಎಂಬುದು ನನಗೆ ತಿಳಿದಿರಲಿಲ್ಲ. ನೆಗೆಟಿವ್​​ ಕಾಮೆಂಟ್​ಗಳನ್ನು ನೋಡಿ ನಾನು ಅಳುತ್ತಿದ್ದೆ. ನನಗೆ ನೆನಪಿದೆ 2ರಿಂದ3 ದಿನಗಳು ರೂಮ್​ನಲ್ಲಿಯೇ ಕುಳಿತು ಅಳುತ್ತಿದ್ದೆ. ಈ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದು ಎಂದಿಗೂ ಯೋಚಿಸಲಿಲ್ಲ ಎಂದಿದ್ದಾರೆ.

ನಾನು ಯಾವಾಗಲೂ ಎಲ್ಲಾ ಕಾಮೆಂಟ್‌ಗಳನ್ನು ಓದುತ್ತೇನೆ. ಆ ಒಂದು ತಿಂಗಳು ನನಗೆ ನೆನಪಿದೆ, ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ, ನನಗೆ ಏಕೆ ತುಂಬಾ ನಕಾರಾತ್ಮಕತೆ ಕಾಮೆಂಟ್​​ ಬರುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿದ್ದವು. ಅರ್ಧದಷ್ಟು ಜನರು ನನ್ನನ್ನು ಹೊಗಳುತ್ತಿದ್ದರು ಮತ್ತು ಅರ್ಧದಷ್ಟು ಜನರು ನನ್ನನ್ನು ಟೀಕಿಸುತ್ತಿದ್ದರು. ನಾನು ಕೆಲಸ ಪಡೆಯುವುದರ ಜತೆಗೆ ಜನರಿಂದ ಕೆಟ್ಟ ಮಾತುಗಳನ್ನು ಕೇಳಬೇಕಾಗಿತ್ತು ಎಂದು ಹೇಳಿದರು.

ನಾನು ಈ ಆಘಾತದಿಂದ ಹೊರಬರಲು ಧ್ಯಾನವನ್ನು ಮಾಡುತ್ತಿದೆ. ನಂತರ ಕ್ರಮೇಣ ನಾನು ಸುಧಾರಿಸಲು ಪ್ರಾರಂಭಿಸಿದೆ ಎಂದು ತಿಳಿಸಿದರು. ತೃಪ್ತಿ ದಿಮ್ರಿ ಅವರು ರಾಜ್‌ಕುಮಾರ್ ರಾವ್ ಜತೆಗೆ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಅಕ್ಟೋಬರ್​​ 11ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net