
ಮುಂಬೈ: ನಟಿ ಅನನ್ಯಾ ಪಾಂಡೆ ಅವರ ಸೋದರ ಸಂಬಂಧಿ ಅಲನ್ನಾ ಪಾಂಡೆ(Alanna Panda) ಸಿನಿಮಾಗಳಿಂದ ಅಲ್ಲ, ಅವರ ಫೋಟೋಶೂಟ್‌ನಿಂದ ಹಿಡಿದು ಫ್ಯಾಶನ್ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರ ತಂದೆ ಚಿಕ್ಕಿ ಪಾಂಡೆ ಮತ್ತು ಅಲನ್ನಾ ಪಾಂಡೆ ನಡುವಿನ ಸಂಭಾಷನೆಯು ಸೆನ್ಸೇಷನ್ ಆಗಿದೆ. ಅಲನ್ನಾ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Singham Again | ‘ಬೇಬಿ ಸಿಂಬಾ’ದ ಚೊಚ್ಚಲ ಚಿತ್ರ.. ರಣವೀರ್ ಸಿಂಗ್ ಮಾತಿನ ಹಿಂದಿನ ಮರ್ಮವೇನು?
ಅಷ್ಟಕ್ಕೂ ಅಲನ್ನಾ ಅವರು ಈಗ ರಿಯಾಲಿಟಿ ಶೋ ದಿ ಟ್ರೈಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಿಯಾಲಿಟಿ ಶೋ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದೆ. ಜಾವೇದ್ ಜಾಫ್ರಿ ಅವರ ಪುತ್ರಿ ಅಲಾವಿಯಾ ಜಾಫ್ರಿ ಕೂಡ ಈ ಶೋನಲ್ಲಿದ್ದಾರೆ. ಈ ಕಾರ್ಯಕ್ರಮದ ವೇಳೆ ಕುಟುಂಬದವರು ತಮ್ಮನ್ನು ಭೇಟಿಯಾದ ವಿಡಿಯೋವನ್ನು ಅಲನ್ನಾ ಹಂಚಿಕೊಂಡಿದ್ದು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಅಲನ್ನಾ ಪಾಂಡೆ ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ ಅಲನ್ನಾ ಬ್ರ್ಯಾಲೆಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದಾರೆ. ಇದನ್ನು ನೋಡಿದ ಅವರ ತಂದೆ ಚಿಕ್ಕಿ ಪಾಂಡೆ ಇಷ್ಟವಾಗದೆ ಅಲನ್ನಾಳನ್ನು ಪ್ರಶ್ನಿಸುವುದುನ್ನು ನೋಡಬಹುದು.
ಅಲನ್ನಾ ನೀವು ಯಾವುದೋ ಕಾರಣದಿಂದ ಶರ್ಟ್ ಧರಿಸುವುದನ್ನು ಮರೆತಿದ್ದೀಯಾ ಎಂದು ಚಿಕ್ಕಿ ಪಾಂಡೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅಲನ್ನಾ ಈ ಉಡುಪಿನಲ್ಲಿ ಏನು ತಪ್ಪಾಗಿದೆ ಎಂದು ಕೇಳುತ್ತಾಳೆ. ನಿಮಗೆ ಶರ್ಟ್ ಬೇಕು ಎಂದು ನೀವು ಭಾವಿಸುವುದಿಲ್ಲವೆ ಎಂದು ಚಿಕ್ಕಿ ಪಾಂಡೆ ಕೇಳಿದಾಗ ಅಲನ್ನಾ ಇದು ಶರ್ಟ್ ಎಂದು ಉತ್ತರಿಸುತ್ತಾರೆ.
ಅಷ್ಟಕ್ಕೆ ನಿಲ್ಲಿಸದೆ ಚಿಕ್ಕಿ ಪಾಂಡೆ ಇದು LA ಅಲ್ಲ, ಇದು ಬಂದ್ರಾ ಎನ್ನುತ್ತಾರೆ. ಅದಕ್ಕೆ ಅಲನ್ನಾ ಇದು ಬ್ರಾಲೆಟ್, ಇದೇ ಟಾಪ್ ಎನ್ನುತ್ತಾರೆ. ಬ್ರಾ ಬಗ್ಗೆ ನೀವು ಏನು ಹೇಳಿದ್ದೀರಿ.ಬ್ರಾ ಎಂದರೆ ಮುಚ್ಚುವುದು ಎನ್ನುತ್ತಾರೆ. ಬಳಿಕ ನೀವು ಅದನ್ನು ಮುಚ್ಚಬಾರದು ಎಂದು ಭಾವಿಸುತ್ತೀರಿ ಎಂದು ಕೇಳುತ್ತಾರರ. ಅದನ್ನು ಕೇಳಿ ಅಲನ್ನಾ ನಗುತ್ತಾ ಕುಳಿತುಕೊಳ್ಳುತ್ತಾಳೆ.
ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ತಂದೆ ಮತ್ತು ಮಗಳ ನಡುವಿನ ಸಿಹಿ ಸಂಭಾಷಣೆ, ತಂದೆ ಮಗಳಿಗೆ ಬಟ್ಟೆ ಹಾಕಲು ಹೀಗೆಯೇ ಸಲಹೆ ನೀಡಬೇಕು, ಅವರ ತಂದೆ ಹೇಳುವುದು ಸಂಪೂರ್ಣವಾಗಿ ಸರಿಯಾಗಿದೆ. ಕುಟುಂಬದ ಮುಂದೆ ಹೇಗೆ ಕುಳಿತುಕೊಳ್ಳಬೇಕು ಎಂದು ತಿಳಿದಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಲನ್ನಾ ಕುರಿತು ಹೇಳುವುದಾದರೆ ಅವರು 2023ರ ಮಾರ್ಚ್ನಲ್ಲಿ ಅಮೆರಿಕ ಮೂಲದ ಸಿನಿಮಾ ನಿರ್ಮಾಪಕ ಐವರ್ ಮೆಕ್‌ಕ್ರೇ ಅವರನ್ನು ವಿವಾಹವಾದರು. ಈ ದಂಪತಿಗೆ ಒಂದು ಮಗುವಿದೆ.(ಏಜೆನ್ಸೀಸ್)