ಮುಂಬೈ: ನಿರ್ದೇಶಕ ರಾಜಮೌಳಿ ಅವರ ಸಿನಿಮಾ ಆರ್ಆರ್ಆರ್ ಸಿನಿಮಾ ರಿಲೀಸ್ ಆಗಿ ಎರಡೂವರೆ ವರ್ಷಗಳೇ ಕಳೆದಿವೆ. ಆದರೆ ಈ ಚಿತ್ರದ ಬಗ್ಗೆ ಇನ್ನೂ ಕೆಲವು ಚರ್ಚೆಗಳು ನಡೆಯುತ್ತಲೆ ಇವೆ. 2022 ಮಾರ್ಚ್ 25ರಂದು ಸಿನಿಮಾ ರಿಲೀಸ್ ಆಗಿದ್ದು, 2023ರಲ್ಲಿ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಗೊತ್ತೆ ಇದೆ. ಈ ಸಿನಿಮಾ ಕುರಿತು ಇತ್ತೀಚೆಗೆ ಬ್ರಿಟಿಷ್ ನಟಿ ಮಿನ್ನಿ ಡ್ರೈವರ್ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ: ಶರ್ಟ್ ಧರಿಸುವುದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದ ತಂದೆ; ಮಗಳು ಕೊಟ್ಟ ಉತ್ತರ ವೈರಲ್ | Alanna Panday
ಇತ್ತೀಚೆಗೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ನಟಿ ಮಿನ್ನಿ ಡ್ರೈವರ್ RRR ಸಿನಿಮಾದ ಬಗ್ಗೆ ಹಾಗೂ ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡಿದ್ದಾರೆ. ಆರ್ಆರ್ಆರ್ ನನ್ನ ಮೆಚ್ಚಿನ ಸಿನಿಮಾ. ನನ್ನ ಮಗನೊಂದಿಗೆ ಅದನ್ನು ಈ ಸಿನಿಮಾ ವೀಕ್ಷಿಸಲು ಇಷ್ಟಪಡುತ್ತೇನೆ. ಇದು ಸಾರ್ವಕಾಲಿಕ ನಮ್ಮ ನೆಚ್ಚಿನ ಚಲನಚಿತ್ರವಾಗಿದೆ. ಮೂರು ಗಂಟೆಗಳಿರುವ ಈ ಆರ್ಆರ್ಆರ್ ಸಿನಿಮಾವನ್ನು ಬಹುಶಃ ಪ್ರತಿ ಮೂರು ತಿಂಗಳಿಗೊಮ್ಮೆ ನೋಡುತ್ತೇವೆ. ಇದುವರೆಗೆ ಮಾಡಿದ ಅತ್ಯಂತ ಸುಂದರವಾದ ಚಿತ್ರಗಳಲ್ಲಿ ಇದು ಒಂದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡಿದ ಅವರು, ನಾನು ಶೆಫ್ ರೋಮಿ ಗಿಲ್ ಅವರ ಉತ್ತಮ ಸ್ನೇಹಿತೆ. ಅವರು ಬೆಂಗಾಲಿ, ಪಂಜಾಬಿ ಕುಟುಂಬದಿಂದ ಬಂದವರು. ಭಾರತಕ್ಕೆ ಭೇಟಿ ನೀಡುವ ಹಾಗೂ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ನನ್ನ ಆಸೆಯ ಕುರಿತು ಅವರೊಂದಿಗೆ ಆಗಾಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಮಿನ್ನಿ ಡ್ರೈವರ್ ಇತ್ತೀಚೆಗೆ ದಿ ಸರ್ಪೆಂಟ್ ಕ್ವೀನ್ ಸೀಸನ್ 2ರಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಕ್ವೀನ್ ಎಲಿಜಬೆತ್ I ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಡೊನಾಲ್ಡ್ ಟ್ರಂಪ್ಗೆ ಟಕ್ಕರ್ ಕೊಟ್ಟಿದ್ದ ಮಹಿಳೆ; ಈಗ ವಿಶ್ವದ ಶ್ರೀಮಂತ ಗಾಯಕಿ | Richest Musician