ಪಶ್ಚಿಮ ಬಂಗಾಳದಲ್ಲಿ ಮತದಾನದ ನಡುವೆಯೇ ಗುಂಡಿನ ದಾಳಿ: ಐವರು ಸಾವು

West Bengal
Published on

ಕೋಲ್ಕತ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ನಡುವೆಯೇ ಗುಂಡಿನ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ಶುರುವಾಗಿದೆ. ಗುಂಡೇಟಿಗೆ ಐವರು ಬಲಿಯಾಗಿದ್ದಾರೆಂದು ಟಿಎಂಸಿ ಆರೋಪಿಸಿದ್ದು, ಬಂಗಾಳದ ಕೂಚ್​ ಬೆಹರ್​ನಲ್ಲಿ ಘಟನೆ ನಡೆದಿದೆ.

ಕೂಚ್​ ಬೆಹರ್​ನ ಸಿತಾಲ್ಕುಚಿಯ ಪಥಂತುಲಿ ಪ್ರದೇಶದ ಬೂತ್​ ನಂಬರ್​ 85ರಲ್ಲಿ ಮತದಾನ ನಡೆಯುವಾಗ ಯುವಕನೊಬ್ಬನನ್ನು ಹೊರಗೆಳೆದು ತಂದು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ಬಿಜೆಪಿ ಮತ್ತು ಟಿಎಂಸಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. ಘಟನೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಟಿಎಂಸಿ ಆರೋಪಿಸಿದರೆ, ಮೃತ ಯುವಕ ನಮ್ಮ ಬೂತ್​ ಏಜೆಂಟ್​ ಎಂದು ಬಿಜೆಪಿ ಟಿಎಂಸಿಯತ್ತ ಬೊಟ್ಟು ಮಾಡಿದೆ.

ಘಟನೆ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗ ಕೇಳಿದ್ದು, ಮತದಾನದ ನಡುವೆಯೇ ಗುಂಡಿನ ಮೊರೆತ ಕೇಳಿಬಂದಿರುವುದು ಮತದಾರರಲ್ಲಿ ಆತಂಕ ಸೃಷ್ಟಿಸಿದೆ.

ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇನ್ನು ನಾಲ್ಕು ಹಂತಗಳು ಬಾಕಿ ಇವೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net