ವಿಶ್ವದ ಅತ್ಯಂತ ಕೊಳಕು ನಾಯಿಗೆ ಸಿಕ್ಕಿತು ಬಹುಮಾನ! ಇಲ್ಲಿವೆ ನೋಡಿ ಫೋಟೋಸ್…

Dog
Published on

ನ್ಯೂಯಾರ್ಕ್: ಕಳೆದ 50 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಪೆಟಾಲುಮಾದಲ್ಲಿ ಸೊನೊಮಾ-ಮರಿನ್ ಮೇಳದ ಅಂಗವಾಗಿ ನಡೆಯುತ್ತಿರುವ 'ಅಗ್ಲಿಯೆಸ್ಟ್ ಡಾಗ್ ಸ್ಪರ್ಧೆ' (Ugliest Dog contest)ಯಲ್ಲಿ ಸ್ಕೂಟರ್ ಹೆಸರಿನ ನಾಯಿ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಜೂನ್ 23 ರಂದು ನಡೆದ ಸ್ಪರ್ಧೆಯಲ್ಲಿ ಏಳು ವರ್ಷ ವಯಸ್ಸಿನ 'ಸ್ಕೂಟರ್' ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಖ್ಯಾತಿಗೆ ಪಾತ್ರವಾಯಿತು. ನಿಯಮದಂತೆ ಟ್ರೋಫಿ ಹಾಗೂ 1.23 ಲಕ್ಷ ($1,500) ರೂಪಾಯಿ ಮೊತ್ತವನ್ನು ಬಹುಮಾನವಾಗಿ ನೀಡಲಾಗಿದೆ. ನಾಯಿಗಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಜನರನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಸ್ಕೂಟರ್ ಹೆಸರಿನ ವಿರೂಪಗೊಂಡ ನಾಯಿ, ಹಿಂಗಾಲುಗಳೊಂದಿಗೆ ಜನಿಸಿದ್ದು, ಮುಂಗಾಲಿನ ಸಹಾಯದೊಂದಿಗೆ ಮುಂದೆ ಹೋಗುತ್ತದೆ. ಅಲ್ಲದೆ ಅಸಾಮಾನ್ಯ ಎಂಬಂತಹ ಕೋರೆಹಲ್ಲುಗಳನ್ನು ಹೊಂದಿದೆ. ಕಪ್ಪು ಬಣ್ಣ 'ಸ್ಕೂಟರ್', ರೋಮಗಳನ್ನು ಹೊಂದಿಲ್ಲ. ಹೀಗಾಗಿ ಇತರೆ ನಾಯಿಗಳಂತೆ ಆಕರ್ಷಕವಾಗಿ ಕಾಣಿಸುತ್ತಿಲ್ಲ. Saving Animals From Euthanasia (SAFE) ಎಂಬ ತಂಡದ ಸದಸ್ಯರು ಈ ನಾಯಿಯನ್ನು ರಕ್ಷಿಸಿದ್ದಾರೆ. ಇದೀಗ ಲಿಂಡಾ ಎಲ್ಮ್ಕ್ವಿಸ್ಟ್(Linda Elmquist) ಎಂಬಾಕೆ ದತ್ತು ಪಡೆದು ಆರೈಕೆ ಮಾಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net