2 ಕೋಟಿ ವರ್ಷ ವಿಕಾಸಗೊಂಡು 2 ಅಡಿ ಬೆಳೆದ ಮರ! ಬೆಳೆದದ್ದು ಅಷ್ಟು ಸುಲಭವಲ್ಲ...

tree
Published on

ಮುಂದುವರಿದ ಭಾಗ..

ಮರಗಿಡಗಳು ಈ ಭೂಮಿಯ ಮೇಲೆ ಏಕಾಏಕಿ ಹುಟ್ಟಿ ಬೆಳೆದಿಲ್ಲ ಎಂಬುದನ್ನು ನಾವು ಗಮನದಲ್ಲಿಡಬೇಕು. ಅವುಗಳ ಹಿಂದೆ ಕೋಟ್ಯಾನುವರ್ಷಗಳ ವತ್ತಾಂತದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿಕೊಂಡು ಹಂತ ಹಂತವಾಗಿ ಆಯಾಯ ಕಾಲಕ್ಕೆ ತಕ್ಕಂತೆ ಹಾರ್ಮೋನ್‌ಗಳನ್ನು ಬದಲಾವಣೆ ವಾಡಿಕೊಳ್ಳುತ್ತಾ ತಮ್ಮದೇಹದಲ್ಲಿ ಪರಿವರ್ತನೆಗಳನ್ನು ವಾಡಿಕೊಂಡು ವಿಕಾಸಗೊಂಡಿವೆ.


ಗಿಡಮರಗಳು ಹುಟ್ಟುವ ಮೊದಲೂ ಮಳೆಗಾಲ, ಬೇಸಿಗೆಕಾಲ, ಚಳಿಗಾಲಗಳು ಇದ್ದವು. ಮಳೆ ಬಂದಾಗ ನದಿ ಕೆರೆಗಳು ತುಂಬುತ್ತಿದ್ದವು, ಆಗ ಅಲ್ಲಿ ಶೈವಲಗಳು (ಆಲ್ಗೆ) ಸಮದ್ಧಿಯಾಗಿ ಬೆಳೆಯುತ್ತಿದ್ದವು. ಬೇಸಿಗೆ ಕಾಲದಲ್ಲಿ ಕೆರೆಯ ನೀರು ಇಂಗಿದಾಗ, ಆ ಶೈವಲಗಳು ಮಣ್ಣಿನ ಮೇಲೆಯೇ ಉಳಿದು ಸತ್ತು ಹೋಗುತ್ತಿದ್ದವು. ಆದರೆ 47.5 ಕೋಟಿ ವರ್ಷಗಳ ಹಿಂದೆ ಮಣ್ಣಿನಲ್ಲಿ ಉಳಿದ ಶೈವಲಗಳಿಗೆ ಅದೇ ಮಣ್ಣಿನಲ್ಲಿದ್ದ ಶಿಲೀಂದ್ರಗಳು (ಅಣಬೆಗಳು) ಬೇರುಗಳನ್ನು ಸಷ್ಟಿವಾಡಿಕೊಳ್ಳಲು ಸಹಾಯ ವಾಡಿದವು.


ಮೊದ ಮೊದಲು ಕೆಲವು ದಿನಗಳ ಕಾಲ ಬದುಕಿ ಸತ್ತುಹೋಗುತ್ತಿದ್ದವು. ನಂತರ ಮುಂದಿನ ತಲೆಮಾರುಗಳಲ್ಲಿ ತನ್ನ ಹಾರ್ಮೋನ್‌ಗಳಲ್ಲಿ ಬದಲಾವಣೆ ಮಾಡಿಕೊಂಡು ಬೇರುಗಳನ್ನು ಬದ್ರ ಮಾಡಿಕೊಂಡು ಕೆಲವು ತಿಂಗಳು, ನಂತರ ಕೆಲವು ವರ್ಷಗಳ ಕಾಲ ಬದುಕಲಾರಂಬಿಸಿದವು. ಹೀಗೆ ಏಳುತ್ತಾ ಬೀಳುತ್ತಾ, ಸಾಯುತ್ತಾ ಕಷ್ಟಪಟ್ಟು ಬೆಳೆದು ಭೂಮಿಯ ಮೇಲೆ ಹರಡಿದವು.


ಶೈವಲಗಳು ನೀರಿನಲ್ಲಿದ್ದಾಗ ತಮ್ಮ ಆಹಾರವನ್ನು ದೇಹದ ಎಲ್ಲ ಭಾಗದಲ್ಲೂ ತಯಾರಿಸಿಕೊಳ್ಳಬಹುದಿತ್ತು. ನೆಲದ ಮೇಲೆ ಬಂದಾಗ ಬೇರುಗಳನ್ನು ಸೃಷ್ಟಿ ಮಾಡಿಕೊಂಡು ನಿಂತು ಬೇರುಗಳ ಮುಖಾಂತರ ಖನಿಜಾಂಶಗಳನ್ನು ತೆಗೆದುಕೊಂಡು ತಮ್ಮ ಆಹಾರ ಉತ್ಪಾದನೆಗೆ ತಯಾರಿ ಮಾಡಿಕೊಂಡವು. ನಂತರ ಹಲವು ಲಕ್ಷ ವರ್ಷಗಳ ವಿಕಾಸದಲ್ಲಿ ಅಲೈಂಗಿಕವಾಗಿಯೇ ಸಂತಾನಾಭಿವೃದ್ಧಿ ಮಾಡಿಕೊಂಡು ನೆಲದ ಮೇಲೆ ಸ್ಥಿರತೆಯನ್ನು ಕಾಪಾಡಿಕೊಂಡವು. ಹಲವು ಕಷ್ಟಗಳನ್ನು ಅನುಭವಿಸಿಕೊಂಡು ಎರಡು ಕೋಟಿ ವರ್ಷಗಳಲ್ಲಿ ವಿಕಾಸಗೊಂಡು ಅಂದಾಜು ಎರಡು ಅಡಿ ಎತ್ತರದವರೆಗೆ ಬೆಳೆಯಲು ಶಕ್ತಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net