More

    ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?

    ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?ಎಲೆ ಮತ್ತು ಮರ ಒಂದು ಫ್ಯಾಕ್ಟರಿ ಇದ್ದಹಾಗೆ, ‘ದ್ಯುತಿ’ ಅಂದರೆ ಬೆಳಕಿನ ಶಕ್ತಿ, ಕಾಂತಿ, ಹೊಳಪು, ‘ಸಂಶ್ಲೇಷಣೆ’ ಎಂದರೆ ಒಂದು ವಸ್ತುವನ್ನು ತಯಾರು ವಾಡುವಾಗ ರಾಸಾಯನಿಕ ಪ್ರಕ್ರಿಯೆಯಿಂದ ಉಂಟಾದ ವಸ್ತುವನ್ನು ಶೇಖರಣೆ ವಾಡುವುದು. ದ್ಯುತಿಸಂಶ್ಲೇಷಣೆ ಕ್ರಿಯೆಯು ಶೈವಲಗಳಲ್ಲಿ, ಸೈನೋಬ್ಯಾಕ್ಟೀರಿಯ ಮತ್ತು ಸಸ್ಯಗಳಲ್ಲಿ ನಡೆಯುತ್ತದೆ. ದ್ಯುತಿಸಂಶ್ಲೇಷಣೆಯ ಬಗ್ಗೆ ತಿಳಿಯಬೇಕೆಂದರೆ, ಮೊದಲು ಗಿಡಮರಗಳ ರಚನೆಯ ಭಾಗಗಳನ್ನು ಮೊದಲು ತಿಳಿಯಬೇಕು.

    ಪತ್ರರಂಧ್ರಗಳು (ಸ್ಟೋಮೋಟಾ) ಮತ್ತು ಪತ್ರಹರಿತ್ತು (ಕ್ಲೋರೋಫಿಲ್) ಮರದ ಎಲೆ, ಎಲೆಯ ಕಾಂಡ ಮತ್ತು ಕೆಲವು ಮರಗಳ ರೆಂಬೆಗಳಲ್ಲಿರುತ್ತವೆ. ಪಾಪಾಸ್ ಕಳ್ಳಿಯಂತಹ ಸಸ್ಯಗಳಲ್ಲಿ ಕಾಂಡದಲ್ಲೆಲ್ಲ ಇರುತ್ತವೆ. ಸಸ್ಯದ ಯಾವ ಭಾಗದಲ್ಲಿ ಹಸಿರು ಕಾಣಿಸುತ್ತದೆಯೋ ಅಲ್ಲಿ ಪತ್ರಹರಿತ್ತು ಇರುತ್ತದೆ. ಈ ತರಹದ ಪತ್ರ ರಂಧ್ರಗಳ ಮೂಲಕ ವಾತಾವರಣ ಮತ್ತು ಸಸ್ಯದ ನಡುವೆ ಇಂಗಾಲದ ಡೈಆಕೈಡ್ ಮತ್ತು ಆಮ್ಲಜನಕ ನಿರಂತರವಾಗಿ ವಿನಿಮಯಗೊಳ್ಳುತ್ತಲೇ ಇರುತ್ತವೆ. ಆದ್ದರಿಂದ ಎಲೆಗಳಲ್ಲಿ ವಾತ್ರವಲ್ಲದೆ, ಕೆಲವು ಜಾತಿಯ ಮರದ ಇತರ ಭಾಗದಲ್ಲೂ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.

    ನಾವು ಉಸಿರಾಡುವ ಆಮ್ಲಜನಕ ನೀರಿನಿಂದ ಬರುತ್ತದೆ. ಬೇರುಗಳು ಹೀರಿಕೊಂಡ ನೀರಿನಲ್ಲಿ ಅಂದಾಜು ಶೇ.99 ನೀರು ಆವಿಯಾಗುತ್ತದೆ, ಕೇವಲ ಶೇ.1 ನೀರಿನಿಂದ ಆಮ್ಲಜನಕ ತಯಾರಾಗುತ್ತದೆ. ಎಲೆಗಳು ಸಸ್ಯದ ಬೇರುಗಳಿಂದ ಹೀರಿಕೊಂಡ ನೀರಿನಲ್ಲಿರುವ ಜಲಜನಕ – ಆಮ್ಲಜನಕದ ಅಣುಗಳನ್ನು ಬೇರ್ಪಡಿಸುತ್ತವೆ. ಆಗ ಆಮ್ಲಜನಕದ ಎರಡು ಅಣುಗಳು ಒಟ್ಟಿಗೆ ಜೋಡಿಯಾಗಿ ಹೊರಬರುತ್ತದೆ. ಸಾವಾನ್ಯವಾಗಿ ಇಂಗಾಲದ ಡೈಆಕ್ಸೈಡ್‌ನಿಂದ ಆಮ್ಲಜನಕ ತಯಾರಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಆಮ್ಲಜನಕವು, ಇಂಗಾಲದ ಡೈಆಕ್ಸೈಡ್‌ನಿಂದ ತಯಾರಾಗುವುದಿಲ್ಲ.

    ಈ ಪತ್ರರಂಧ್ರಗಳು ಗಾಳಿಯಲ್ಲಿರುವ ಎಲ್ಲ ಅನಿಲಗಳನ್ನು ಒಳಗೆ ತೆಗೆದುಕೊಳ್ಳುತ್ತವೆ. ಆದರೆ, ಎಲೆಯ ಒಳಗೆ ಇರುವ ‘ಪ್ಯಾರೆಂಕೈವಾ’ ಎಂಬ ಕೋಶಗಳು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸ್ತ್ಯೈಡ್‌ನ್ನು ವಾತ್ರ ತೆಗೆದುಕೊಳ್ಳುತ್ತವೆ. ಗಾಳಿಯಲ್ಲಿರುವ ಉಳಿದ ಅನಿಲಗಳು ಹೊರಹೋಗುತ್ತವೆ. ನಂತರ ಎಲೆಗಳು, ಸೂರ್ಯನ ಶಾಖ, ಇಂಗಾಲದ ಡೈಆಕ್ಸೈಡ್‌ ಮತ್ತು ನೀರಿನ ಸಹಾಯದಿಂದ, ತನ್ನ ಆಹಾರವಾದ ಗ್ಲೂಕೋಸ್, ಪ್ರೊಟೀನ್ಸ್, ಕೊಬ್ಬು ಮತ್ತು ಪಿಷ್ಠವನ್ನು ತಯಾರಿಸಿಕೊಳ್ಳುತ್ತವೆ.

    ಸಸ್ಯಗಳಿಗೆ ನೀರು, ಉಷ್ಣಾಂಶ ಮತ್ತು ಇಂಗಾಲದ ಡೈಆಕ್ಸೈಡ್‌, ಈ ಮೂರರಲ್ಲಿ ಯಾವುದೇ ಒಂದು ಸರಿಯಾಗಿ ದೊರೆಯದಿದ್ದಲ್ಲಿ ದ್ಯುತಿಸಂಶ್ಲೇಷಣೆ ನಡೆಯುವುದಿಲ್ಲ. ಉದಾಹರಣೆಗೆ, ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿರುವ ಸಸ್ಯಗಳ ಮೇಲೆ ಮತ್ತು ಅಕ್ಕಪಕ್ಕದ ಬೆಳೆಯ ಮೇಲೆ ದೂಳು ಕೂತರೆ ಅವುಗಳಿಗೆ ಉಸಿರು ಕಟ್ಟುತ್ತದೆ. ದ್ಯುತಿಸಂಶ್ಲೇಷಣೆ ವಾಡಲು ಕಷ್ಟವಾಗಿ ತನ್ನ ಆಹಾರವನ್ನು ತಯಾರಿಸಿಕೊಳ್ಳಲಾಗದೆ ಸಸ್ಯಗಳು ನರಳುತ್ತವೆ.

    ಸಸ್ಯಗಳ ಬೆಳವಣಿಗೆ ಮತ್ತು ಇತರ ಚಟುವಟಿಕೆಗಳು ನಡೆಯಲು ಉಷ್ಣಾಂಶ ಬೇಕು, ಅಂತಹ ಉಷ್ಣಾಂಶವನ್ನು ವಾತಾವರಣದಿಂದ ತೆಗೆದುಕೊಳ್ಳುತ್ತವೆ. ಅಂದರೆ ಹೆಚ್ಚಿನ ಪಕ್ಷ ಎಲ್ಲ ಸಸ್ಯಗಳು ಹಗಲಿನಲ್ಲಿ ಹೆಚ್ಚು ದ್ಯುತಿಸಂಶ್ಲೇಷಣೆ ಮಾಡುತ್ತವೆ. ಅದೇ ರೀತಿ, ಮಣ್ಣಿನಲ್ಲಿ ಸಾಕಷ್ಟು ನೀರಿದ್ದರೆ ವಾತ್ರ ಪತ್ರರಂಧ್ರಗಳು ಬಾಯಿ ಮುಚ್ಚಿ ತೆಗೆಯುತ್ತವೆ. ನೀರು ಕಡಿಮೆ ಇದ್ದರೆ ಇವುಗಳು ಬಾಯಿ ಮುಚ್ಚಿ ನೀರು ಆವಿಯಾಗದ ಹಾಗೆ ನೋಡಿಕೊಂಡು ಮರದಲ್ಲಿ ನೀರು ಉಳಿಯುವ ಹಾಗೆ ನೋಡಿಕೊಳ್ಳುತ್ತವೆ.

    ಮರದ ಕೆಳಭಾಗಕ್ಕೆ ಸೂರ್ಯನ ಬಿಸಿಲು ತಲುಪದೇ ಇರುವುದರಿಂದ, ಕೆಳಭಾಗದ ಎಲೆಗಳಿಂದ ದ್ಯುತಿಸಂಶ್ಲೇಷಣೆ ಕಡಿಮೆಯಾಗುತ್ತದೆ ಮತ್ತು ಮೋಡ ಕವಿದ ವಾತಾವರಣವಿದ್ದರೂ ದ್ಯುತಿಸಂಶ್ಲೇಷಣೆ ಕಡಿಮೆಯಾಗುತ್ತದೆ. ಕೆಲವು ಮರಗಳ ಕಾಂಡದಲ್ಲಿ ಉಷ್ಣಾಂಶ ಹೆಚ್ಚಿದ್ದರೆ ರಾತ್ರಿಯ ಸಮಯದಲ್ಲಿಯೂ ದ್ಯುತಿಸಂಶ್ಲೇಷಣೆ ವಾಡಿ ಮರದ ಉಷ್ಣಾಂಶವನ್ನು ಕಾಪಾಡಿಕೊಳ್ಳುತ್ತವೆ. ಆದರೆ, ಎಲ್ಲ ಸಸ್ಯಗಳಿಗೂ ಒಂದೇ ಸೂತ್ರ ಅನ್ವಯಿಸುವುದಿಲ್ಲ. ಪ್ರತಿ ಸಸ್ಯಗಳ ದೇಹ ರಚನೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ.

    ಸೂರ್ಯನ ರೀತಿ ಹತ್ತಾರು ಬಲ್ಬುಗಳ ಮುಖಾಂತರ ಒಂದು ಗಿಡಕ್ಕೆ ಬೆಳಕನ್ನು ಬಿಟ್ಟು ಕತಕವಾಗಿ ದ್ಯುತಿಸಂಶ್ಲೇಷಣೆ ವಾಡಬಹುದು. ಆದರೆ, ನೀಲಿ ಬಣ್ಣ ಬರುವ ನಿಯಾನ್ ಬಲ್ಬುಗಳನ್ನು ವಾತ್ರ ಉಪಯೋಗಿಸಬೇಕು. ಕೆಂಪು ಬಣ್ಣ ಸೂಸುವ ಬಲ್ಬುಗಳನ್ನು ಉಪಯೋಗಿಸಿದರೆ ಪ್ರಯೋಜನವಾಗುವುದಿಲ್ಲ. ಆದರೆ, ಬಲ್ಬುಗಳು ವಿದ್ಯುತ್‌ನ್ನು ಎಳೆದು ಇಂಗಾಲದ ಡೈಆಕ್ಸ್ತ್ಯೈಡ್ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಆದ್ದರಿಂದ ಕತಕವಾಗಿ ದ್ಯುತಿಸಂಶ್ಲೇಷಣೆ ವಾಡುವುದು ನಿಸರ್ಗಕ್ಕೂ ಮತ್ತು ಆರ್ಥಿಕವಾಗಿಯೂ ಒಳ್ಳೆಯದಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts