ದಾವಣಗೆರೆ ವೈದ್ಯೆಯಿಂದ ಅಮೆರಿಕದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ: ಗರ್ಭಿಣಿಯಾಗಿದ್ದರೂ ದಿನದ 12 ಗಂಟೆ ಸೇವೆ

doctor may
Published on

ದಾವಣಗೆರೆ: ಅಮೆರಿಕದ ಅಯೋವಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ದಾವಣಗೆರೆ ಮೂಲದ ರಚನಾ ರಮೇಶ್ ಅಂಬರಕರ್, ಅಲ್ಲಿನ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದು, ಗರ್ಭಿಣಿಯಾಗಿದ್ದರೂ ದಿನದ 12 ಗಂಟೆ ಸೇವೆ ಸಲ್ಲಿಸುತ್ತಿದ್ದಾರೆ.

ರಚನಾ ದಾವಣಗೆರೆಯ ಜವಳಿ ವರ್ತಕ ರಮೇಶ್ ಅಂಬರಕರ್ ಅವರ ಪುತ್ರಿ. ತಾಯಿ ರೂಪಶ್ರೀ. ರಚನಾ ಇಲ್ಲಿನ ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ಶಾಲಾ ವ್ಯಾಸಂಗ ಮಾಡಿದರು. ಎಂಬಿಬಿಎಸ್ ಪದವಿಯನ್ನು ನಗರದ ಎಸ್‌ಎಸ್‌ಐಎಂಎಸ್ ಕಾಲೇಜಿನಲ್ಲಿ ಪಡೆದರು. ಅಮೆರಿಕದಲ್ಲೇ ಎಂ.ಡಿ. ಶಿಕ್ಷಣ ಪೂರೈಸಿದರು.

ಕಳೆದ ಒಂದು ವರ್ಷದಿಂದ ಶಿಕಾಗೊ ಸಮೀಪದ ಅಯೋವಾ ನಗರದ ಅಯೋವಾ ವಿವಿಯ ಆಸ್ಪತ್ರೆಯಲ್ಲಿ ಫಿಜಿಷಿಯನ್ ಆಗಿದ್ದಾರೆ. ಅವರ ಪತಿ ರೋಹನ್ ಗರ್ಜೆ ಪ್ರಾಸ್ಟೇಟ್ ಕ್ಯಾನ್ಸರ್ ತಜ್ಞ ವೈದ್ಯರಾಗಿ ಅದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಚನಾ ಸೋಮವಾರದಿಂದ ಶುಕ್ರವಾರದವರೆಗೆ ದಿನದ 12 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು, ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಪಿಪಿಇ ಕಿಟ್ ಬಳಸುತ್ತಿದ್ದಾರೆ.

‘‘ವಿದೇಶದಲ್ಲಿ ಮಗಳು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯಾಗುತ್ತಿದೆ’’ ಎನ್ನುತ್ತಾರೆ ರಮೇಶ್ ಅಂಬರಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net