

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶಿಸಿದೆ.
ಇತ್ತೀಚಿಗೆ ಬೆಂಗಳೂರು ಸಿಸಿಬಿ ಮುಖ್ಯಸ್ಥ ಹುದ್ದೆಯಿಂದ ಮೈಸೂರು ಪೊಲೀಸ್ ಅಕಾಡೆಮಿಗೆ ವರ್ಗಾವಣೆಯಾಗಿದ್ದ ಡಾ.ಎಸ್.ಡಿ ಶರಣಪ್ಪ ಅವರ ಆದೇಶ ರದ್ದುಪಡಿಸಿದ ಸರ್ಕಾರವು, ಈಗ ರಾಜ್ಯ ರೈಲ್ವೆ ಪೊಲೀಸ್ ಇಲಾಖೆಯ ಡಿಐಜಿ ಹುದ್ದೆ ನೀಡಿದೆ.
ಇನ್ನು ಹುದ್ದೆ ನಿರೀಕ್ಷೆಯಲ್ಲಿದ್ದ ಡಾ.ಕೆ. ಧರಣಿದೇವಿಗೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿ ಸರ್ಕಾರ ನೇಮಿಸಿದೆ.