ಲಿಫ್ಟ್ ಅಂದುಕೊಂಡು ಒಳಗಡೆ ಹೆಜ್ಜೆಯಿಟ್ಟ ಮಹಿಳಾ ಉದ್ಯೋಗಿಗೆ ಕಾದಿತ್ತು ಭೀಕರ ಸಾವು..!

Woman
Published on

ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ಲಿಫ್ಟ್​ ಅಪಘಾತದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ದುರಂತ ಸಾವಿಗೀಡಾಗಿದ್ದಾರೆ.

ಕೊರ್ಲಗುಂಟಾ ಪಟ್ಟಣದ ಅಪಾರ್ಟ್​ಮೆಟ್​ ಒಂದರಲ್ಲಿ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ವಸಂತಿ ಎಂದು ಗುರುತಿಸಲಾಗಿದೆ. ಎಲೆವೇಟರ್​ ಬರುವ ಮುನ್ನವೇ ನಾಲ್ಕನೇ ಮಹಡಿಯಲ್ಲಿ ಎಲೆವೇಟರ್​ ಬಾಕ್ಸ್​ ಗೇಟ್​ ತೆರೆದುಕೊಂಡು ಅನಾಹುತ ನಡೆದಿದೆ.

ಎಲೆವೇಟರ್​ ಬರುವ ಮುನ್ನ ಸರಿಯಾಗಿ ಸಿಗ್ನಲ್​ ಲೈಟ್​ ಅನ್ನು ಗಮನಿಸದೆ ಲಿಫ್ಟ್​ ಅಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ ವಸಂತಿ ಇದ್ದಕ್ಕಿಂದಂತೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಘಟನೆಯ ಬೆನ್ನಲ್ಲೇ ವಂಸತಿ ಪತಿ ಸುರೇಂದ್ರ ರೆಡ್ಡಿ ದೂರು ದಾಖಲಿಸಿದ್ದು, ಅಪಾರ್ಟ್​ಮೆಂಟ್​ ಮಾಲೀಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net