ಹೆಣ್ಣುಮಗುವಿನ ತಂದೆಯಾದ ನಟ, ಸಂಸದ: ಟ್ವಿಟರ್​ನಲ್ಲಿ ಮಗುವಿನ ಫೋಟೋ ಜತೆ ಸಂತಸ

manoj tiwari
Published on

ನವದೆಹಲಿ: ನಟ ಹಾಗೂ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಬುಧವಾರ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.
ಈ ಕುರಿತು ಟ್ವಿಟರ್​ನಲ್ಲಿ ಮಗುವಿನ ಜತೆ ಸಂತಸವನ್ನು ಹಂಚಿಕೊಂಡಿದ್ದಾರೆ. ನನ್ನ ಮನೆಗೆ ಹೊಸ ದೇವತೆ ಆಗಮಿಸಿದ್ದಾಳೆ, ನನಗೆ ಹೆಣ್ಣುಮಗುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರಿಗೆ ಇದು ಎರಡನೆಯ ವಿವಾಹ. ಈಗಾಗಲೇ ವಿಚ್ಛೇದಿತ ಪತ್ನಿಯಿಂದ ಇವರಿಗೆ ಹೆಣ್ಣುಮಗುವಿದೆ. ಇದು ಇವರ ಎರಡನೆಯ ಮಗು.

ಮನೋಜ್​ ತಿವಾರಿ ಬಿಜೆಪಿ ಸಂಸದರಾಗುವ ಮೊದಲು ನಟ ಕೂಡ. ದೇವ್ರಾ ಭೈಲ್ ದೀವಾನಾ ಎಂಬ ಭೋಜ್‌ಪುರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ 2014ರಲ್ಲಿ ತೆರೆ ಕಂಡಿತ್ತು. ಅಷ್ಟೇ ಅಲ್ಲದೇ 2010ರಲ್ಲಿ ನಡೆದ ಬಿಗ್‌ಬಾಸ್ ಸೀಸನ್ 4ನಲ್ಲಿ ಕೂ ಇವರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net