ಸೋಮವಾರದಿಂದ 11 ದಿನ ಪುಣೆಯಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಣೆ...!

Lockdown 12 May 20
Published on

ಪುಣೆ: ದೇಶದಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಮುಂಬೈ ಜತೆಗೆ, ಪುಣೆಯಲ್ಲಿಯೂ ನಿತ್ಯವೂ ಸಾವಿರಗಟ್ಟಲೇ ಪ್ರಕರಣಗಳು ವರದಿಯಾಗುತ್ತಿವೆ. ಗುರುವಾರವೂ 1,800ಕ್ಕೂ ಹೆಚ್ಚು ಹೊಸ ಕೇಸ್​ಗಳು ಪತ್ತೆಯಾಗಿವೆ. ಈ ಕಾರಣದಿಂದಾಗಿ ಸೋಮವಾರದಿಂದ 11 ದಿನಗಳವರೆಗೆ (ಜು.13-23) ಕಟ್ಟುನಿಟ್ಟಾಗಿ ಸಂಪೂರ್ಣ ಲಾಕ್​ಡೌನ್​ ಜಾರಿಗೊಳಿಸಲಾಗುತ್ತಿದೆ.

ಪುಣೆ ಜಿಲ್ಲಾದ್ಯಂತ ಈ ಲಾಕ್​​ಡೌನ್​ ಅನ್ವಯಿಸಲಿದೆ. ಜತೆಗೆ, ಪಿಂಪ್ರಿ- ಚಿಂಚವಾಡಾ ಜಿಲ್ಲೆಗಳಲ್ಲೂ ಲಾಕ್​ಡೌನ್​ ವಿಧಿಸಲಾಗುತ್ತಿದೆ. ಅಗತ್ಯ ವಸ್ತುಗಳ ಮಳಿಗೆಗಳಿಗೆ ಮಾತ್ರ ತೆರೆಯಲು ಅವಕಾಶವಿದ್ದು, ಇನ್ನುಳಿದ ಅಂಗಡಿಗಳು ಬಂದ್​ ಇರಲಿವೆ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಪುಣೆಯ ಗ್ರಾಮೀಣ ಪ್ರದೇಶದ 22 ಹಳ್ಳಿಗಳಲ್ಲೂ ಕರೊನಾ ಸೋಂಕು ಹೆಚ್ಚಾಗಿದೆ. ಈ ಗ್ರಾಮಗಳಲ್ಲೂ ಲಾಕ್​ಡೌನ್​ ಮಾಡಲಾಗುವುದು ಎಂದು ಪುಣೆ ಜಿಲ್ಲಾಧಿಕಾರಿ ನವಲ್​ ಕಿಶೋರ್​ ರಾಮ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net