2024ರಲ್ಲಿ ಅತಿ ಹೆಚ್ಚು ಟ್ರೆಂಡ್ ಆದ ವಿಷಯಗಳಿವು! ಗೂಗಲ್​ ಸರ್ಚ್​ನಲ್ಲಿ ಜನ ಹುಡುಕಿದ್ದು ಇದೇ ನೋಡಿ | Google Search

ವಿಜಯವಾಣಿ - 2024-12-10T183022.166
Published on

Google Search: ಪ್ರಸ್ತುತ ವರ್ಷದ ಕೊನೆಯ ತಿಂಗಳು ಡಿಸೆಂಬರ್​ನಲ್ಲಿ ನಾವೆಲ್ಲಾ ಇದ್ದೀವಿ. ಇದೊಂದು ತಿಂಗಳು, ವರ್ಷದ ಪೂರ ಏನೇನಾಯಿತೋ ಅದನ್ನೆಲ್ಲ ನೆನಪಿಸಿಕೊಳ್ಳುವ ಒಂದು ಸಮಯ. ಜಗತ್ತು, ದೇಶದಲ್ಲಿ ಉಂಟಾದ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆದ ಸಿಹಿ-ಕಹಿ ವಿಷಯಗಳನ್ನು ಒಮ್ಮೆ ಮೆಲುಕು ಹಾಕಿಕೊಳ್ಳಲು ಡಿಸೆಂಬರ್​ ಸೂಕ್ತವಾಗಿದೆ. ಪ್ರತಿವರ್ಷ ಹೊರಬೀಳುವ ಮಾಹಿತಿ ಪ್ರಕಾರ, ಭಾರತದಲ್ಲಿ ಈ ವರ್ಷ ಯಾವ ವಿಷಯಗಳು ಗೂಗಲ್​ನಲ್ಲಿ ಹೆಚ್ಚು ಹುಡುಕಲಾಗಿದೆ ಎಂಬುದರ ವರದಿ ಇದೀಗ ಪ್ರಕಟವಾಗಿದೆ.

ಜಾಗತಿಕವಾಗಿ ಈ ವರ್ಷ ಸಾಕಷ್ಟು ವಿಷಯಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿವೆ ಮತ್ತು ಟ್ರೆಂಡಿಂಗ್​ ಸಾಲಿನಲ್ಲಿ ಸದ್ದು ಮಾಡಿವೆ. ರಾಜಕೀಯ ಬದಲಾವಣೆಗಳು, ಕ್ರೀಡೆ ಬೆಳವಣಿಗೆಗಳು, ಸಿನಿಮಾ, ಯುದ್ಧ ಹೀಗೆ ಹಲವು ಬಹುಮುಖ್ಯ ಸುದ್ದಿಗಳು ಸಿಕ್ಕಾಪಟ್ಟೆ ಚರ್ಚೆಯಾಗಿದ್ದವು. ಜನರು ಅತೀ ಹೆಚ್ಚಾಗಿ ಯಾವುದರ ಮೇಲೆ ಹೆಚ್ಚು ಆಸಕ್ತಿ ತೋರಿದ್ದಾರೆ. ಯಾವುದನ್ನು ಗೂಗಲ್​ನಲ್ಲಿ ವ್ಯಾಪಕವಾಗಿ ಸರ್ಚ್​ ಮಾಡಿದ್ದಾರೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಗೂಗಲ್​ನಲ್ಲಿ ಹುಡುಕಲಾದ 10 ವಿಷಯಗಳಿವು

1.ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​)

2. ಟಿ20 ವಿಶ್ವಕಪ್

3. ಭಾರತೀಯ ಜನತಾ ಪಕ್ಷ/ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​

4. ಚುನಾವಣಾ ಫಲಿತಾಂಶಗಳು 2024

5. ಒಲಿಂಪಿಕ್ಸ್

6. ಅಧಿಕ ಉಷ್ಣಾಂಶ

7. ರತನ್ ಟಾಟಾ

8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

9. ಪ್ರೊ ಕಬಡ್ಡಿ ಲೀಗ್

10. ಇಂಡಿಯನ್ ಸೂಪರ್ ಲೀಗ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net