

ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆಯಲಿರುವ ಮೂರನೇ ವರ್ಷದ ಜಾತ್ರೋತ್ಸವದ ಪೂರ್ವಭಾವಿ ಸಭೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಅಶ್ವಿನಿ ನೇತತ್ವದಲ್ಲಿ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು.
ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಕುಮಾರ್ ಆರ್.ನಾಯರ್, ಪ್ರಧಾನ ಕಾರ್ಯದರ್ಶಿಯಾಗಿ ವ್ಯವಸ್ಥಾಪನಾ ಸಮಿತಿ ವಾಜಿ ಸದಸ್ಯ ವಿನ್ಯಾಸ್ ಯು.ಎಸ್., ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ವಿಜಯ ಬಿ.ಎಸ್. ಮತ್ತು ಶಿವರಾಮ ಆಳ್ವ ಬಳ್ಳಮಜಲು, ಉಪಾಧ್ಯಕ್ಷರಾಗಿ ರವೀಂದ್ರ ಎಸ್., ರವೀಂದ್ರ ರಾವ್, ಭೀಮಯ್ಯ ಭಟ್, ಸುರೇಶ್ ಪೂಜಾರಿ, ಉಮೇಶ್ ಎಸ್.ಕೆ. ಮತ್ತು ಶ್ರೀಕೃಷ್ಣ ಭಟ್, ಕೋಶಾಧಿಕಾರಿಯಾಗಿ ಉದಯ ಕುವಾರ್ ರೈ ಎಸ್. ಸಂಪ್ಯ, ಜತೆ ಕಾರ್ಯದರ್ಶಿಗಳಾಗಿ ಕುಂಞಣ್ಣ ಗೌಡ ಮತ್ತು ರವಿ ಗೌಡ ಬೈಲಾಡಿ ಅವರನ್ನು ಆಯ್ಕೆ ವಾಡಲಾಯಿತು.
ಗೌರವ ಸಲಹೆಗಾರರಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಪ್ರಮುಖರಾದ ಕೃಷ್ಣಪ್ಪ, ಜಯಂತ ನಡುಬೈಲು, ಈಶ್ವರ ಭಟ್ ಪಂಜಿಗುಡ್ಡೆ, ರಮೇಶ್ ಪ್ರಭು ವಿನ್ನರ್, ಪ್ರಸನ್ನ ಕುವಾರ್ ವಾರ್ತ, ಮುರಳೀಕೃಷ್ಣ ಹಸಂತಡ್ಕ, ಭಾಸ್ಕರ ಆಚಾರ್ ಹಿಂದಾರ್, ದಿವಾಕರ ದಾಸ್ ನೇರ್ಲಾಜೆ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಗಂಗಾಧರ ಅಮೀನ್, ಸಿ.ಡಿ. ಸುರೇಶ್, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಬೂಡಿಯಾರು ರಾಧಾಕೃಷ್ಣ ರೈ, ಜಯಂತ ಶೆಟ್ಟಿ ಕಂಬಳತ್ತಡ್ಡ, ರಮೇಶ್ ರೈ ನೆಲ್ಲಿಕಟ್ಟೆ, ಅಣ್ಣಿ ಪೂಜಾರಿ ಸಂಪ್ಯ, ಡಾ.ರಮೇಶ್ ಭಟ್, ಡಾ.ವೇಣುಗೋಪಾಲ್, ನರೇಂದ್ರ ನಾಯಕ್ ಮರಕ್ಕ, ಸೋಮಶೇಖರ ರೈ ಇಳಂತಾಜೆ, ವಸಂತ ರೈ ಕೃತಿಕಾ ಹಾಗೂ ಉದಯಶಂಕರ ರೈ ಪುಣಚ ಅವರನ್ನು ಆಯ್ಕೆ ಮಾಡಲಾಯಿತು. ಉಪ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ, ಅರುಣ್ ಕುವಾರ್ ಪುತ್ತಿಲ, ಶ್ರೀಕೃಷ್ಣ ಭಟ್, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ವಿಜಯ ಬಿ.ಎಸ್., ಅಧ್ಯಕ್ಷ ಜಯಕುವಾರ್ ಆರ್. ನಾಯರ್, ಪ್ರಧಾನ ಕಾರ್ಯದರ್ಶಿ ವಿನ್ಯಾಸ್ ಯು.ಎಸ್. ಉಪಸ್ಥಿತರಿದ್ದರು. ಉದಯ ಕುವಾರ್ ರೈ ಎಸ್. ಸಂಪ್ಯ ಸ್ವಾಗತಿಸಿ, ವಂದಿಸಿದರು.