ಗೂಗಲ್​ ಸರ್ಚ್​​ನಲ್ಲಿ ಈ ವರ್ಷ ಮಿಂಚಿದ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ TOP 10

jaibhim
Published on

ನವದೆಹಲಿ: 2021ರಲ್ಲಿ ಇಂಟರ್​​ನೆಟ್​ನಲ್ಲಿ ಅತಿಹೆಚ್ಚು ಸರ್ಚ್​ ಮಾಡಲಾದ ವಿಚಾರಗಳ ವಿವಿಧ ರೀತಿಯ ಮಾಹಿತಿಗಳನ್ನು ಸರ್ಚ್​ ಇಂಜಿನ್​​ ಕಂಪೆನಿ ಗೂಗಲ್ ದೇಶವಾರು ಪಟ್ಟಿಗಳಾಗಿ ಪ್ರಕಟಿಸಿದೆ. ಆ ಪ್ರಕಾರವಾಗಿ ಸಿನಿಮಾ ವಿಭಾಗದಲ್ಲಿ ಭಾರತೀಯರು ಅತಿಹೆಚ್ಚು ಗೂಗಲ್​ ಮಾಡಿದ ಚಿತ್ರಗಳ ಟಾಪ್​ ಟೆನ್​ ಪಟ್ಟಿ ಕೂಡ ಹೊರಬಿದ್ದಿದೆ.

ಒಟಿಟಿಯಲ್ಲಿ ಬಿಡುಗಡೆಯಾದ ಸೂರ್ಯ ನಟಿಸಿದ ತಮಿಳು ಸೂಪರ್​ ಹಿಟ್​ ಸಿನಿಮಾ ಜೈಭೀಮ್​ ಮೊದಲ ಸ್ಥಾನದಲ್ಲಿದ್ದು, ಸಿದ್ಧಾರ್ಥ್​ ಮಲ್ಹೋತ್ರ ನಟಿಸಿದ ಸೇನಾಧಿಕಾರಿಯೊಬ್ಬನ ನೈಜಕಥೆ ಆಧಾರಿತ ಹಿಂದಿ ಸಿನಿಮಾ ಶೇರ್​ಶಾಹ್​ ಎರಡನೇ ಸ್ಥಾನದಲ್ಲಿದೆ. ಅತಿಹೆಚ್ಚು ಅಬ್ಬರ ಮಾಡಿ ವಿಮರ್ಶಕರಿಂದ ಅಷ್ಟು ಹೊಗಳಿಸಿಕೊಳ್ಳದ ಸಲ್ಮಾನ್​ ಖಾನ್​​ರ ಚಿತ್ರ ರಾಧೇ ಮೂರನೇ ಸ್ಥಾನದಲ್ಲಿದೆ.

4ನೇ ಸ್ಥಾನದಲ್ಲಿ ಅಕ್ಷಯ್​ ಕುಮಾರ್​​ರ ಬೆಲ್​ ಬಾಟಮ್​, 5ನೇ ಸ್ಥಾನದಲ್ಲಿ ಮಾರ್ವೆಲ್​ ಸ್ಟುಡಿಯೋಸ್​ನ ಆಂಗ್ಲಚಿತ್ರ ಎಟರ್ನಲ್ಸ್​, 6ನೇ ಸ್ಥಾನದಲ್ಲಿ ನಟ ವಿಜಯ್​ರ ಮಾಸ್ಟರ್​​, 7ನೇ ಸ್ಥಾನದಲ್ಲಿ ಹಿಂದಿ ಚಿತ್ರ ಸೂರ್ಯವಂಶಿ, ​8ನೇ ಸ್ಥಾನದಲ್ಲಿ ಆಂಗ್ಲ ಚಿತ್ರ ಗಾಡ್​ಜಿಲ್ಲಾ ವರ್ಸಸ್​​ ಕಾಂಗ್​ ಕಂಡುಬಂದಿವೆ. ಮಲಯಾಳಂ ಥ್ರಿಲ್ಲರ್​ ದೃಶ್ಯಂ 9ನೇ ಅತಿಹೆಚ್ಚು ಸರ್ಚ್​ ಮಾಡಲಾದ ಸಿನಿಮಾದ ಸ್ಥಾನದಲ್ಲಿದ್ದರೆ, ಭಾರತ-ಪಾಕ್​ ಯುದ್ಧದ ಕಥಾವಸ್ತುವುಳ್ಳ ಭುಜ್​: ದ ಪ್ರೈಡ್ ಆಫ್​ ಇಂಡಿಯಾ ಹಿಂದಿ ಚಿತ್ರ 10ನೇ ಸ್ಥಾನದಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net