ಬಂಡವಾಳ ಹಾಕಿದ್ದು ಲಕ್ಷ ಲಕ್ಷ, ರೈತನ ಕೈಗೆ ಸಿಕ್ಕಿದ್ದು ಬರೀ 10 ರೂಪಾಯಿ!

tomato
Published on

ಚಿತ್ರದುರ್ಗ: ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಟೊಮ್ಯಾಟೊ ಬೆಳೆದ ರೈತನಿಗೆ ಸಿಕ್ಕದ್ದು ಎಷ್ಟು ರೂಪಾಯಿ ಗೊತ್ತಾ? ಕೇವಲ 10 ರೂಪಾಯಿ!

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರೈತ ದಂಪತಿ ಲಕ್ಷ್ಮಣ ಮತ್ತು ಜಯಲಕ್ಷ್ಮೀ ಎರಡೂವರೆ ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಟೊಮ್ಯಾಟೊ ಬೆಳೆದಿದ್ದಾರೆ. ಉತ್ತಮ ಇಳುವರಿಯೂ ಬಂದಿದೆ. 118 ಬಾಕ್ಸ್ ಟೊಮ್ಯಾಟೊವನ್ನು ಬಾಡಿಗೆ ವಾಹನದಲ್ಲಿ ಹಾಕಿಕೊಂಡು ಕೋಲಾರ ಮಾರುಕಟ್ಟೆಗೆ ಬಂದ ರೈತನ ಕೈಗೆ ಬಂದ ಹಣ ಕೇವಲ 5350 ರೂಪಾಯಿ. ಈ ಪೈಕಿ ವಾಹನ ಬಾಡಿಗೆ, ಹಮಾಲಿ ಕೂಲಿ ತೆಗೆದು ಉಳಿದದ್ದು 10 ರೂಪಾಯಿ ಮಾತ್ರ! ಇದನ್ನೂ ಓದಿರಿ ಬೆಂಗಳೂರಲ್ಲಿ ಸಚಿವರ ಮನೆ ಮುಂದೆ ಸಿಬ್ಬಂದಿ ಮಾರಾಮಾರಿ! ವಿಡಿಯೋ ವೈರಲ್​

ಫಸಲು ತೆಗೆಯಲು ಹಾಕಿದ ಬಂಡವಾಳ ಇರಲಿ ರೈತನ ಕೂಲಿಯೂ ದಕ್ಕಲಿಲ್ಲ. ಕಷ್ಟಪಟ್ಟು ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗದೆ ಕಂಗಾಲದ ರೈತನ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದ್ದು, ರೈತ ದಂಪತಿ ಕಣ್ಣೀರು ಹಾಕುತ್ತಿದೆ.

ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಟೊಮ್ಯಾಟೊದಿಂದ ಸಿಕ್ಕ 10 ರೂ.ಯನ್ನು ಪ್ರಧಾನಿ ಕಚೇರಿಗೆ ಕಳಹಿಸಲು ರೈತ ದಂಪತಿ ನಿರ್ಧರಿಸಿದೆ. ಆ ಮೂಲಕ ತಮ್ಮ ಸಂಕಷ್ಟದ ಜತೆಗೆ ರೈತರ ಸಮಸ್ಯೆ ತಿಳಿಸುವ ಪ್ರಯತ್ನ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net