ಟೊಮ್ಯಾಟೊ ಬೆಲೆ ದಿಢೀರ್​ ಕುಸಿತ: ರೈತರು ಕಂಗಾಲು

tomato
Published on

ಕೋಲಾರ: ಟೊಮ್ಯಾಟೊ ಬೆಲೆ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

15 ಕೆಜಿ ಟೊಮ್ಯಾಟೊ ಬಾಕ್ಸ್ ಕೇವಲ 50 ರಿಂದ ಗರಿಷ್ಠ 200 ರೂಪಾಯಿಗೆ ಮಾರಾಟವಾಗುತ್ತಿದೆ. ಟೊಮ್ಯಾಟೊ ಬೆಳಯಲು ಒಂದು ಎಕರೆಗೆ ಸುಮಾರು 1 ರಿಂದ‌ 2 ಲಕ್ಷ ರೂ. ವೆಚ್ಚ ಬರುತ್ತೆ. ಆದರೀಗ ಬೆಲೆ ಕುಸಿದ ಪರಿಣಾಮ ಹಾಕಿದ ಬಂಡವಾಳವೂ ಕೈಗೆ ಸಿಗದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗುಣಮಟ್ಟವಿಲ್ಲದ ಟೊಮ್ಯಾಟೊ ಮತ್ತು ಬೇರೆ ರಾಜ್ಯದ ವರ್ತಕರಿಂದ ಬೇಡಿಕೆ ಇಲ್ಲದ ಕಾರಣ ಟೊಮ್ಯಾಟೊ ‌ಬೆಲೆ‌ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net