

Noida: ಮನೆಯ ಶೌಚಾಲಯ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಒಂದು ವಿಚಿತ್ರ ಮತ್ತು ಭಯಾನಕ ಘಟನೆ ನಡೆದಿದ್ದು, ಮನೆಯ ಶೌಚಾಲಯ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಆಶು ಎನ್ನುವ ಯುವಕ ತೀವ್ರ ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆಗೆ ಸೇರಿದ್ದಾನೆ. ವೈದ್ಯರು ಅವರಿಗೆ 35% ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ, ಜೊತೆಗೆ ಆ ಸಮಯದಲ್ಲಿ ಆಶು ಯಾವುದೇ ಮೊಬೈಲ್ ಫೋನ್ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಬಳಸುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಗಿದ್ದೇನು?
ಆ ಸಮಯದಲ್ಲಿ ಮನೆಯ ಎಸಿ ಮತ್ತು ಇತರ ಉಪಕರಣಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಅಪಾಯಕಾರಿಯಾದ ಮೀಥೇನ್ ಅನಿಲದ ಸಂಗ್ರಹವೇ ಕಾರಣ ಸ್ಪೋಟಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಮುಚ್ಚಿಹೋಗಿರುವ ಡ್ರೈನ್ನಿಂದಾಗಿ ಶೌಚಾಲಯದಲ್ಲಿ ಮೀಥೇನ್ ಸಂಗ್ರಹವಾಗಿರಬಹುದು ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ನಿಖರವಾದ ಮೂಲ ತಿಳಿದಿಲ್ಲದಿದ್ದರೂ, ಒಂದು ಕಿಡಿ ಅನಿಲವನ್ನು ಹೊತ್ತಿಸಿ ಸ್ಫೋಟಕ್ಕೆ ಕಾರಣವಾಯಿತು ಎಂದು ಅವರು ಶಂಕಿಸಿದ್ದಾರೆ. (ಏಜೆನ್ಸೀಸ್)