Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು ತಮ್ಮ ಮಕ್ಕಳನ್ನು ಕಾರಿನೊಳಗೆ ಬಿಟ್ಟು ತಮ್ಮ ಪಾಡಿಗೆ ತಾವು ಬೇರೆ ಕೆಲಸದಲ್ಲಿ ನಿರತರಾಗುವ ಮೂಲಕ ಮಕ್ಕಳ ಆಪತ್ತಿಗೆ ಕಾರಣರಾಗುತ್ತಾರೆ. ಅಥವಾ ಕಾರಿನ ಡೋರ್ ಅನ್ನು ಸರಿಯಾಗಿ ಲಾಕ್ ಮಾಡದೇ ಇರುವ ಕಾರಣಗಳಿಂದಾಗಿ ಮಕ್ಕಳು ಕಾರಿನ ಬಾಗಿಲು ತೆಗೆದು ಆಟವಾಡಲು ಹೋಗಿ ಅಪಾಯ ತಂದೊಡ್ಡಿಕೊಳ್ಳುತ್ತವೆ.

ಇದನ್ನೂ ಓದಿ: ಭಯೋತ್ಪಾದಕ ಮಸೂದ್ ಅಜರ್‌ಗೆ ‘ಪಾಕ್’ ಸರ್ಕಾರ 14 ಕೋಟಿ ರೂ. ನೀಡುವ ಸಾಧ್ಯತೆ| Pakistan
ಪೋಷಕರು ಗಮನಿಸಬೇಕಾದ ಅಂಶಗಳು:
1)ವಾಹನವನ್ನು ಲಾಕ್ ಮಾಡುವ ಮೊದಲು, ಯಾರಾದರೂ ಒಳಗೆ ಇದ್ದಾರೆಯೇ ಎಂದು ನೀವು ಪರಿಶೀಲಿಸಬೇಕು.
2) ಮಕ್ಕಳನ್ನು ವಾಹನಗಳ ಬಳಿ ಒಂಟಿಯಾಗಿ ಆಡಲು ಬಿಡಬಾರದು. ವಾಹನಗಳು ಆಟಿಕೆಗಳಲ್ಲ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು ಇದರೊಟ್ಟಿಗೆ ಮಕ್ಕಳ ಜೀವಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
3) ವಾಹನಗಳು ಆಟವಾಡಲು ಸ್ಥಳಗಳಲ್ಲ ಎಂಬುದನ್ನು ಮಕ್ಕಳಿಗೆ ಸ್ಪಷ್ಟಪಡಿಸಬೇಕು. ವಾಹನಗಳನ್ನು ಒಬ್ಬಂಟಿಯಾಗಿ ಪ್ರವೇಶಿಸಬಾರದು ಎಂದು ಅವರಿಗೆ ಮನವರಿಕೆ ಮಾಡಬೇಕು.
4) ವಾಹನದ ಕಿಟಕಿಗಳ ಮೇಲೆ ಭಾರೀ ಟಿಂಟಿಂಗ್‌ಗಳನ್ನು ಬಳಸಬಾರದು. ಇದರಿಂದ ನಿಮ್ಮ ಮಕ್ಕಳು ಕಾರಿನ ಒಳಗಡೆ ಇದ್ದರೂ ಸಹ ನಿಮ್ಮ ಗಮನಕ್ಕೆ ಬರದಂತಾಗುತ್ತದೆ.
ಇದನ್ನೂ ಓದಿ: ಭಾರತದ ಗಡಿ ಭದ್ರತೆಗೆ ಒತ್ತು; ಮೇ 18 ರಂದು ಇಸ್ರೋದಿಂದ ಭೂ ವೀಕ್ಷಣೆ ಉಪಗ್ರಹ ಉಡಾವಣೆ| Isro
5) ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾದಾಗ, ಮಕ್ಕಳು ನಿಲ್ಲಿಸಿದ ವಾಹನಗಳ ಸುತ್ತಲೂ ಆಟವಾಡುತ್ತಿದ್ದರೆ ತಕ್ಷಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
6) ನಿಮ್ಮ ಕಾರ್ಅನ್ನು ಲಾಕ್ ಮಾಡುವ ಮೊದಲು, ವಾಹನದಲ್ಲಿ ಯಾರಾದರೂ ಇದ್ದಾರೆಯೇ ಎಂದು ಸಂಪೂರ್ಣವಾಗಿ ಪರಿಶೀಲಿಸುವುದು ಅವಶ್ಯಕ.
7) ಮಕ್ಕಳನ್ನು ವಾಹನದಲ್ಲಿ ಅಥವಾ ವಾಹನದ ಸುತ್ತಲೂ ಒಂಟಿಯಾಗಿ ಬಿಡಬಾರದು.
8) ವಾಹನದ ಬೀಗಗಳನ್ನು ಮಕ್ಕಳ ಕೈಗೆಟುಕುವ ಸ್ಥಳದಲ್ಲಿ ಇಡಬಾರದು.
ಇತ್ತೀಚೆಗೆ ಮಕ್ಕಳು ಆಕಸ್ಮಿಕವಾಗಿ ನಿಲ್ಲಿಸಿದ್ದ ವಾಹನಗಳಿಗೆ ಉಸಿರುಗಟ್ಟಿ ಸಾವನ್ನಪ್ಪುತ್ತಿರುವ ಘಟನೆಗಳು ಕಳವಳಕಾರಿಯಾಗಿವೆ. ಈ ಸಂದರ್ಭದಲ್ಲಿ, ಇಂತಹ ಘಟನೆಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಮಕ್ಕಳ ಜೀವಗಳನ್ನು ಉಳಿಸಬಹುದು.
(ಏಜೆನ್ಸೀಸ್)