ತಾಯಿಯ ಸೆಲ್ಫಿ ಕ್ರೇಜ್​​ಗೆ ಎರಡೂವರೆ ವರ್ಷದ ಮಗು ಬಲಿಯಾಯ್ತು; ಬೀಚ್​​ನಲ್ಲಿ ಮಹಾ ದುರಂತ

Beach
Published on

ಆಲಪ್ಪುಳ: ಸೆಲ್ಫಿ ಕ್ರೇಜ್​​ನಿಂದಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಜಲಪಾತ, ಸಮುದ್ರ, ನದಿಗಳ ಆಸುಪಾಸು ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವವರು ಆಯತಪ್ಪಿ ಬಿದ್ದು ಜೀವ ಬಿಡುವ ಪ್ರಕರಣಗಳೇ ಹೆಚ್ಚಾಗಿವೆ.

ಹಾಗೇ ಕೇರಳದ ಆಲಪ್ಪುಳ ಬಳಿ ಅಮ್ಮನ ಸೆಲ್ಫಿ ಹುಚ್ಚಿಗೆ ಎರಡೂವರೆ ವರ್ಷದ ಗಂಡುಮಗುವಿನ ಪ್ರಾಣ ಹೋಗಿದೆ. ಭಾನುವಾರ ಸಂಜೆ ಹೊತ್ತು ಮಹಿಳೆ ತನ್ನ ಮಗನನ್ನು ಎತ್ತುಕೊಂಡು ಸಮುದ್ರದ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಜೋರಾದ ಅಲೆಗಳು ಹೊಡೆದು ಆಯತಪ್ಪಿದ್ದಾರೆ. ಆಗ ಅವರ ತೋಳಿನಲ್ಲಿದ್ದ  ಮಗುವನ್ನು ಕೈಬಿಟ್ಟಿದ್ದಾರೆ. ಆ ಪುಟ್ಟ ಗಂಡುಮಗು ಅಲೆಗಳಲ್ಲಿ ಕೊಚ್ಚಿಹೋಗಿ ಮೃತಪಟ್ಟಿದೆ. ಇಂದು ಅದರ ಮೃತದೇಹ ಸಿಕ್ಕಿದೆ. ಇದನ್ನೂ ಓದಿ: ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಮೃತ ಮಗುವಿನ ಹೆಸರು ಆದಿಕೃಷ್ಣ. ಭಾನುವಾರ ಸಂಜೆ ಜೋರಾಗಿ ಮಳೆಯೂ ಸುರಿಯುತ್ತಿತ್ತು. ಆದಿಕೃಷ್ಣನ ಅಪ್ಪ-ಅಮ್ಮ, ಅವರ ಸಂಬಂಧಿಕರೆಲ್ಲ ಸೇರಿ ಬೀಚ್​ಗೆ ತೆರಳಿದ್ದರು. ಅಲೆಗಳ ಪ್ರಮಾಣವೂ ಜಾಸ್ತಿ ಇತ್ತು.

ಈ ದಂಪತಿ ಪಲಕ್ಕಡ್ ನಿವಾಸಿಗಳು ಎಂದು ತಿಳಿದುಬಂದಿದೆ. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತ್ರಿಶೂರ್​ಗೆ ಬಂದಿದ್ದರು. ಆಗ ಬಂಧುಗಳೆಲ್ಲ ಸೇರಿ ಬೀಚ್​ಗೆ ತೆರಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net