ಆಕಸ್ಮಿಕವಾಗಿ ಮಗು ಮೇಲೆ ಕಾರು ಹತ್ತಿಸಿದ ವೃದ್ಧ; ಕಂದಮ್ಮ ಮೃತ್ಯು!

Untitled design (37)
Published on

ಕೇರಳ: ಮನೆಯ ಅಂಗಳದಲ್ಲಿ ಕಾರನ್ನು ನಿಲ್ಲಿಸಲು ಮುಂದಾಗುತ್ತಿದ್ದ ವೃದ್ಧನಿಗೆ ಮಗು ಕಾರಿನ ಮುಂದಿರುವುದು ಕಾಣದೆ, ಕಾರು ಹತ್ತಿಸಿದ ಕಾರಣ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ದುರ್ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವರದಿಯಾಗಿದೆ.

ಪುಟ್ಟ ಕಂದಮ್ಮ ಮನೆಯ ಮುಂಭಾಗದಲ್ಲಿ ಒಡಾಡುತ್ತಿರುವುದು ಕಾರು ಚಾಲನೆ ಮಾಡುತ್ತಿದ್ದ ಅಜ್ಜನಿಗೆ ಕಂಡಿಲ್ಲ. ವಾಹನವನ್ನು ಸರಿಯಾಗಿ ನಿಲ್ಲಿಸುವ ವೇಳೆ ಮಗುವಿನ ಮೇಲೆ ಕಾರು ಹತ್ತಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಕಂದಮ್ಮ ಮೃತಪಟ್ಟಿದ್ದು, ಘಟನೆಯ ದೃಶ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ನಡೆದಾಗ ಮತ್ತೊಂದು ಮಗು ಅಂಗಳದಲ್ಲಿ ಆಟವಾಡುತ್ತಿತ್ತು. ಅಪಘಾತ ಸಂಭವಿಸಿದ ಕೂಡಲೇ ಮಗು ಕಾರಿನಡಿ ಸಿಲುಕಿರುವುದನ್ನು ಕಂಡು, ಸಹಾಯಕ್ಕೆ ಕಿರುಚಾಡಿದೆ. ತಕ್ಷಣ ಕಾರಿನಿಂದ ಕೆಳಗಿಳಿದ ವೃದ್ಧ, ಮಗುವನ್ನು ತನ್ನ ತೋಳುಗಳಲ್ಲಿ ಹೊತ್ತೊಯ್ದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net