ಮತ್ತೊಮ್ಮೆ ಪ್ರಭಾಸ್​ ಚಿತ್ರದ ದೃಶ್ಯಗಳು ಸೋರಿಕೆ!; 'ಕಲ್ಕಿ 2898 ಎಡಿ' ಚಿತ್ರಕ್ಕೆ ಎದುರಾಯಿತು ಸಂಕಟ

Untitled design (36)
Published on

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಕಲ್ಕಿ 2898 AD' ಚಿತ್ರದ ಬಹುಮುಖ್ಯ ಬಾಗಗಳ ಚಿತ್ರೀಕರಣದ ದೃಶ್ಯಗಳು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಇದರಿಂದ ಚಿತ್ರತಂಡ ತೀವ್ರ ಆತಂಕಕ್ಕೆ ಒಳಗಾಗಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ನಿರ್ಮಾಪಕ ನಾಗ್ ಅಶ್ವಿನ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸೈನ್ಸ್​-ಫಿಕ್ಷನ್​ 'ಕಲ್ಕಿ 2898 ಎಡಿ' ಚಿತ್ರಕ್ಕೆ ಮತ್ತೊಮ್ಮೆ ಈ ಸೋರಿಕೆ ಸಂಕಷ್ಟ ಎದುರಾಗಿದ್ದು, ಸದ್ಯ ಚಿತ್ರ ತಯಾರಕರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಿದೆ. ಕಳೆದ ಸಪ್ಟೆಂಬರ್​ ತಿಂಗಳಲ್ಲಿ ಚಿತ್ರತಂಡ ಇದೇ ರೀತಿಯ ಸೋರಿಕೆ ಕುರಿತು ಎಚ್ಚರಿಕಯೊಂದನ್ನು ನೀಡಿತ್ತು. ಆದ್ರೂ ಈ ಘಟನೆ ಮರುಕಳಿಸಿದೆ.

ಈ ಸುದ್ದಿ ಸದ್ಯ ಪ್ರಭಾಸ್​ ಅಭಿಮಾನಿಗಳಿಗೆ ಹಾಗೂ ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರವನ್ನು ಮೂಡಿಸಿದೆ. ಇಷ್ಟು ದೊಡ್ಡ ಸಿನಿಮಾದ ದೃಶ್ಯಗಳು ಸೆಟ್‌ಗಳಿಂದ ಹೇಗೆ ಸೋರಿಕೆಯಾಗುತ್ತಿದೆ ಎಂದು ಫ್ಯಾನ್ಸ್​ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೇ ಚಿತ್ರ ತಯಾರಕರು ಸೋರಿಕೆ ಕುರಿತು ಖಡಕ್ ಎಚ್ಚರಿಕೊಂದನ್ನು ನೀಡಿದ್ದರು. ಇಷ್ಟದಾರು ಕೂಡ ಇದೀಗ ಮತ್ತೊಮ್ಮೆ ಸೋರಿಕೆಯಾಗಿರುವುದು ಗಂಭೀರ ಸಮಸ್ಯೆಯಾಗಿ ಪರಿವರ್ತಿಸಿದೆ.

ವೈಜಯಂತಿ ಮೂವೀಸ್ ನಿರ್ಮಿಸಿರುವ ಈ ಹೈ-ಬಜೆಟ್ ಚಿತ್ರದಲ್ಲಿ ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದು, ದಿಶಾ ಪಟಾನಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪಡುಪತಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸುವ ಜವಾಬ್ದಾರಿಯನ್ನು ಸಂತೋಷ್ ನಾರಾಯಣನ್ ತೆಗೆದುಕೊಂಡಿದ್ದಾರೆ. ಚಿತ್ರ ಜನವರಿ 12, 2024ಕ್ಕೆ ಜಾಗತಿಕ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net