ಇಂದು ನಮ್ಮ ಮೊದಲ ರಾತ್ರಿ... ಮದ್ವೆಯಾದ ಬೆನ್ನಲ್ಲೇ ಖಾಸಗಿ ಫೋಟೋಗಳನ್ನು ಹಂಚಿಕೊಂಡ ದಂಪತಿ! First Night

First Night
Published on

First Night : ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಖಾಸಗಿ ಜೀವನ ಎಂಬುದಿದೆ. ಹೊರಗಿರನವರು ಅದರೊಳಗೆ ಇಣುಕಿ ನೋಡುವುದನ್ನು ಯಾರೂ ಕೂಡ ಬಯಸುವುದಿಲ್ಲ. ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವುದು ಕೂಡ ಕಾನೂನಿನ ಪ್ರಕಾರ ಅಪರಾಧ. ಆದರೆ, ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇಂದು ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಸಾಕಷ್ಟು ಘಟನೆಗಳನ್ನು ಪ್ರತಿನಿತ್ಯ ನೋಡುತ್ತಲೇ ಇರುತ್ತವೆ. ಆದರೆ, ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಂಡರೆ ಅಂಥರಿಗೆ ಏನನ್ನಬೇಕೋ?

ಮದುವೆ ಎಂಬದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಕ್ಷಣ. ಅದನ್ನು ಕೊನೆಯವರೆಗೂ ನೆನಪಿನಲ್ಲಿ ಉಳಿಯವಂತೆ ಮಾಡಲು ವಿಭಿನ್ನವಾಗಿ ಆಚರಣೆ ಮಾಡಲು ಇಷ್ಟಪಡುತ್ತಾರೆ. ಮದುವೆಯ ಬಳಿಕ ಎದುರಾಗುವ ಮೊದಲ ರಾತ್ರಿಯಂತೂ ದಂಪತಿಗಳ ವೈವಾಹಿಕ ಜೀವನಕ್ಕೆ ಹೊಸ ಅರ್ಥ ನೀಡುತ್ತದೆ. ಏಕೆಂದರೆ, ಎರಡು ದೇಹಗಳ ಜೊತೆಗೆ ಎರಡು ಮನಸ್ಸುಗಳು ಒಂದಾಗಿ ಬಾಳ ಪಯಣವನ್ನು ಒಟ್ಟಿಗೆ ಆರಂಭಿಸುವ ಮಧುರ ಕ್ಷಣ ಅದು.

ಮೊದಲ ರಾತ್ರಿಯೆಂದರೆ ಅದೊಂದು ಖಾಸಗಿ ಕ್ಷಣ. ಆದರೆ, ಕ್ಷಣಕ್ಕೆ ಧಕ್ಕೆ ಉಂಟು ಮಾಡಿದರೆ ಅದಕ್ಕಿಂತ ಮಹಾಪಾರಧ ಬೇರೊಂದಿಲ್ಲ. ಆದರೆ, ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವದಂಪತಿ ತಮ್ಮ ಮೊದಲ ರಾತ್ರಿಯ ಕೆಲವು ಖಾಸಗಿ ಫೋಟೋಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್.ರಾಧಾ 143 ಹೆಸರಿನ ಫೇಸ್​ಬುಕ್​ ಖಾತೆಯು ಕೇವಲ ಖಾಸಗಿ ಕ್ಷಣಗಳ ಫೋಟೋಗಳನ್ನೇ ಒಳಗೊಂಡಿದೆ. ದಂಪತಿಯ ನಿಜವಾದ ಹೆಸರು ಮತ್ತು ಇತರ ಮಾಹಿತಿಗಳು ಲಭ್ಯವಿಲ್ಲ. ಆದರೆ, ಫೇಸ್​ಬುಕ್​ ಪೇಜ್​ನಲ್ಲಿ ಹೆಚ್ಚಾಗಿ ಖಾಸಗಿ ಕ್ಷಣಗಳ ಚಿತ್ರಗಳು ಮತ್ತು ವಿಡಿಯೋಗಳೇ ತುಂಬಿವೆ. ಅಲ್ಲದೆ, ದಂಪತಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

First Night 1

ವೈರಲ್​ ಫೋಟೋದಲ್ಲಿ ನವದಂಪತಿ ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಅಪ್ಪಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲಿ, ಮಹಿಳೆ, ಪುರುಷನನ್ನು ಚುಂಬಿಸುತ್ತಿದ್ದಾಳೆ. ಇಂದು ನಮ್ಮ ಮೊದಲ ರಾತ್ರಿ ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 38,000ಕ್ಕೂ ಹೆಚ್ಚು ಜನರು ಈ ಫೋಟೋಗಳನ್ನು ನೋಡಿದ್ದಾರೆ. ಕೆಲವರು ದಂಪತಿಗೆ ಮದುವೆಗೆ ಶುಭ ಹಾರೈಸಿದ್ದಾರೆ. ಆದರೆ ಹೆಚ್ಚಿನವರು ನೆಗೆಟಿವ್​ ಆಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಇಂತಹ ಚಿತ್ರಗಳನ್ನು ಏಕೆ ಪ್ರದರ್ಶಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕೆಲವರಂತೂ ಮೊದಲ ರಾತ್ರಿಯ ವಿಡಿಯೋ ಕಳುಹಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net