ಪ್ರೇಮಿಗಳ ದಿನದ ಒಂದೇ ವಾರಕ್ಕೆ ಬ್ರೇಕಪ್​!; ಇಂದು ಹೀಗೂ ಮಾಡಬಹುದು...

Breakup
Published on

ಬೆಂಗಳೂರು: ಫೆ. 14 ಎಂದರೆ ಅದು ಪ್ರೇಮಿಗಳ ದಿನ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಪ್ರೇಮಿಗಳ ದಿನಕ್ಕೂ ಮುಂಚಿನ ಏಳು ದಿನವನ್ನು ವ್ಯಾಲೆಂಟೈನ್​ ವೀಕ್​ ಆಗಿ, ಫೆ. 14ರವರೆಗೂ ಒಂದೊಂದು ದಿನವನ್ನು ಒಂದೊಂದು ಡೇ ಎಂದು ಆಚರಿಸಲಾಗುತ್ತದೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಅಂದರೆ ಆ್ಯಂಟಿ ವ್ಯಾಲೆಂಟೈನ್​ ವೀಕ್ ಎಂಬುದೊಂದು ಕೂಡ ಇದೆ. ಮಾತ್ರವಲ್ಲ, ಪ್ರೇಮ ನಿವೇದನೆಗೆ ಇರುವಂತೆ ಪ್ರೀತಿಯನ್ನು ಕಡಿದುಕೊಳ್ಳುವುದಕ್ಕೂ ಅರ್ಥಾತ್​ ಬ್ರೇಕಪ್ ಡೇ ಎಂತಲೂ ಒಂದಿದೆ, ಅದು ಇಂದೇ.

ಹೌದು.. ಫೆ. 21 ಬ್ರೇಕಪ್ ಡೇ ಆಗಿ ಆಚರಣೆ ಆಗುತ್ತಿದೆ. ಪ್ರೀತಿ-ಪ್ರೇಮದ ಸಂಬಂಧ ಹೊಂದಿರದವರು ಅಥವಾ ಪ್ರೇಮ ವೈಫಲ್ಯವಾದವರು ಈ ವ್ಯಾಲೆಂಟೈನ್ ವೀಕ್ ಆಚರಿಸುತ್ತಾರೆ ಮತ್ತು ಈ ವ್ಯಾಲೆಂಟೈನ್ ವೀಕ್​, ಫೆ. 21ರ ಬ್ರೇಕಪ್​ ಡೇಯೊಂದಿಗೆ ಕೊನೆಗೊಳ್ಳುತ್ತದೆ.

ಅಂದಹಾಗೆ ಬ್ರೇಕಪ್ ಡೇ ಎಂದ ಮಾತ್ರಕ್ಕೆ ಅದು ಬರೀ ಪ್ರೀತಿಗೆ ಸಂಬಂಧಿಸಿದ್ದು ಮಾತ್ರ ಅಂತೇನೂ ಇಲ್ಲ. ಕೆಟ್ಟ ಅಥವಾ ಕೈಕೊಟ್ಟ ಸಂಬಂಧ ಕಡಿದುಕೊಳ್ಳುವುದಕ್ಕಷ್ಟೇ ಈ ಬ್ರೇಕಪ್ ಡೇ ಅಲ್ಲ. ಕೆಟ್ಟದ್ದರಿಂದ ದೂರ ಇರುವುದಕ್ಕೂ, ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡುವುದಕ್ಕೂ ಇದೇ ದಿನವನ್ನು ಪಾಶ್ಚಾತ್ಯರು ಆರಿಸಿಕೊಳ್ಳುತ್ತಿದ್ದಾರೆ. ನೋಡಿ.. ಕೆಟ್ಟದ್ದೇನಾದರೂ ಅಭ್ಯಾಸವಾಗಿದ್ದರೆ ಅದನ್ನು ಇಂದು ಈ ನೆಪದಲ್ಲೇ ಬಿಟ್ಟುಬಿಡಬಹುದು. ನಿಮ್ಮನ್ನು ಬ್ರೇಕ್​​ಡೌನ್​ ಮಾಡುವಂಥ ಯಾವುದೇ ಅಭ್ಯಾಸವಿದ್ದರೂ ಅದಕ್ಕೊಂದು ಬ್ರೇಕಪ್​ ಹೇಳಿಬಿಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net