More

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ಕೊಡಗು: ಇವರಿಬ್ಬರು ಮದುವೆಯಾಗಿ ಬರೀ ಹತ್ತು ತಿಂಗಳುಗಳಷ್ಟೇ ಆಗಿದ್ದವು. ಆದರೆ ಅಷ್ಟರಲ್ಲಾಗಲೇ ದುರಂತ ಸಂಭವಿಸಿದ್ದು, ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶಿವಮೊಗ್ಗ ಮೂಲದ ಯುವರಾಜ್ ದಂಪತಿ, ಹತ್ತು ತಿಂಗಳ ಹಿಂದೆ ಶಿಲ್ಪಾಳನ್ನು ಮದುವೆಯಾಗಿದ್ದರು. ಆ ಬಳಿಕ ಇಬ್ಬರೂ ಪೊನ್ನಂಪೇಟೆಯ ಬಿರುನಾಣಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.

    ಇದನ್ನೂ ಓದಿ: ತಂಗಿಯ ಸಂಸಾರ ಸರಿಪಡಿಸಲು ಹೋದವ ಆಕೆಯ ಗಂಡನಿಂದಲೇ ಕೊಲೆಗೀಡಾದ!

    ಫಾರೆಸ್ಟ್​ ಗಾರ್ಡ್​ ಆಗಿರುವ ಯುವರಾಜ್ ಇಂದು ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಹೆಂಡತಿ ಜೀವಂತ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಶವ ನೋಡಿದ ಯುವರಾಜ್, ಆಕೆಯ ಕಳೇಬರವನ್ನು ಕೆಳಗಿಳಿಸಿ​ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ರೋಚಕ ರಕ್ಷಣಾ ಕಾರ್ಯಾಚರಣೆ; ಟ್ರೆಕ್ಕಿಂಗ್ ವೇಳೆ ಕಂದಕಕ್ಕೆ ಬಿದ್ದವನ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts