ತಂಗಿಯ ಸಂಸಾರ ಸರಿಪಡಿಸಲು ಹೋದವ ಆಕೆಯ ಗಂಡನಿಂದಲೇ ಕೊಲೆಗೀಡಾದ!

Babu
ಆರೋಪಿ ಬಾಬು
Published on

ಕೋಲಾರ: ತಂಗಿಯ ಸಂಸಾರ ಸರಿಪಡಿಸಲೆಂದು ಹೋಗಿದ್ದ ಅಣ್ಣ, ಬಳಿಕ ತಂಗಿಯ ಗಂಡನಿಂದಲೇ ಕೊಲೆಗೀಡಾದ ದುರಂತವೊಂದು ಸಂಭವಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಗೌತಮನಗರದಲ್ಲಿ ಈ ಘಟನೆ ನಡೆದಿದೆ.

ಸುರೇಶ್​ (36) ಕೊಲೆಗೀಡಾಗಿದ್ದು, ಸಹೋದರ ಹರೀಶ್ (33) ಗಾಯಗೊಂಡಿದ್ದಾನೆ. ತಂಗಿ ಗಂಡ ಬಾಬು ಕೊಲೆ ಆರೋಪಿ. ಬಾಬು ಕೂಡ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುರೇಶ್ ತಂಗಿಯನ್ನು ಬಾಬು ಮದುವೆಯಾಗಿದ್ದು, ಪತಿ-ಪತ್ನಿ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತಂಗಿಯ ಸಂಸಾರವನ್ನು ಸರಿಪಡಿಸಿ ಬರೋಣ ಎಂದು ಸಹೋದರರಾದ ಸುರೇಶ್​-ಹರೀಶ್​ ಅವರು ಬಾಬು ಮನೆಗೆ ಬಂದಿದ್ದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಮಾರಾಮಾರಿ ನಡೆದು ಅದರಲ್ಲಿ ಸುರೇಶ್ ಕೊಲೆಗೀಡಾಗಿದ್ದಾನೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net