ನಕಲಿ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದಿದ್ದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ತುತ್ತು

mimi
Published on

ಕೋಲ್ಕತ: ತಾನೊಬ್ಬ ಐಎಎಸ್​ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನಡೆಸಿದ್ದ ನಕಲಿ ಕರೊನಾ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ಲಸಿಕೆ ಪಡೆದುಕೊಂಡಿದ್ದ ಟಿಎಂಸಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಮಿಮಿ ಚಕ್ರವರ್ತಿ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ರಕ್ತದೊತ್ತಡ ಕಡಿಮೆಯಾಗಿರುವುದಾಗಿ ಹೇಳಲಾಗಿದೆ. ಡಿಹೈಡ್ರೇಷನ್ ಇಂದ ಬಳಲುತ್ತಿರುವ ಅವರು ಅನಾರೋಗ್ಯಕ್ಕೆ ತುತ್ತಾಗುವುದಕ್ಕೆ ಕಾರಣ ನಕಲಿ ಕರೊನಾ ಲಸಿಕೆಯೇ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿಸಲಾಗಿದೆ.

ಅವರು ಈ ಹಿಂದೆ ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನುವುದನ್ನು ತಿಳಿಸಲಾಗಿದೆ.

ಕೋಲ್ಕತದಲ್ಲಿ ಐಎಎಸ್​ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಡೆಬಂಜನ್ ದೇಬ್ ಹೆಸರಿನ ವ್ಯಕ್ತಿಯೊಬ್ಬ ಲಸಿಕಾ ಅಭಿಯಾನಗಳನ್ನು ನಡೆಸಿದ್ದ. ಆತನನ್ನು ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net