ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು

Tired of her husbands alcoholism the wife herself drank poison and poisoned the other children as well
Published on

-8 ವರ್ಷದ ಮಗಳು ಸಾವು, ತಾಯಿ, ಮಗ ಅಸ್ವಸ್ಥ

ಕೊಳ್ಳೇಗಾಲ: ಕುಡಿದು ಜಗಳವಾಡುತ್ತಿದ್ದ ಗಂಡನ ವರ್ತನೆಗೆ ಬೇಸತ್ತು ಹೆಂಡತಿ ತಾನೂ ವಿಷ ಕುಡಿದು ತನ್ನ ಇಬ್ಬರು ಮಕ್ಕಳಿಗೂ ವಿಷ ಉಣಿಸಿದ್ದಾಳೆ. ಈ ಪರಿಣಾಮ 8 ವರ್ಷದ ಮಗಳು ಮೃತಪಟ್ಟಿದ್ದು, ತಾಯಿ ಹಾಗೂ ಮಗನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ತಾಲೂಕಿನ ಮಧುವನಹಳ್ಳಿ ಗ್ರಾಮದ ಷಣ್ಮುಗ ಎಂಬುವರ ಪುತ್ರಿ ಸಿಂಧು (8) ಮೃತ ಪಟ್ಟ ಬಾಲಕಿ. ಪತ್ನಿ ಶೀಲಾ( 28), ಪುತ್ರ ದುಷ್ಯಂತ್(10) ಅಸ್ವಸ್ಥಗೊಂಡವರು.

ನಡೆದಿದ್ದೇನು?: ಷಣ್ಮುಗ ಮಂಗಳವಾರ ಕುಡಿದ ಮತ್ತಿನಲ್ಲಿ ಪತ್ನಿ ಜತೆ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ. ಇದ್ದರಿಂದ ಬೇಸತ್ತಿದ್ದ ಶೀಲಾ ಬುಧವಾರ ಬೆಳಗ್ಗಿನ ಜಾವದಲ್ಲಿ ತಾನೂ ವಿಷ ಸೇವಿಸಿ ಮಕ್ಕಳಾದ ಸಿಂಧು, ದುಷ್ಯಂತ್ ಗೂ ವಿಷ ಕುಡಿಸಿದ್ದಾಳೆ. ಮನೆಯಲ್ಲಿ ‌ವಿಷ ಕುಡಿದು ಅಸ್ವಸ್ಥಗೊಂಡಿದ್ದ ಮೂವರನ್ನು ನೋಡಿದ ನೆರೆ-ಹೊರೆಯವರು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಸಕಾಲಕ್ಕೆ ಆಸ್ಪತ್ರೆಗೆ ರವಾನಿಸಲಾಗದ ಕಾರಣಕ್ಕೆ ಬಾಲಕಿ ಸಿಂಧು ಮೃತ ಪಟ್ಟಿದ್ದಾಳೆ. ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಷಣ್ಮುಗ ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಪೊಲೀ ಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net