ಬಾಲಿವುಡ್ನ ಹಿರಿಯ ನಟ ಜಾಕಿ ಶ್ರಾಫ್ಗೆ ಇಬ್ಬರು ಮಕ್ಕಳು. ಮಗ ಟೈಗರ್ ಶ್ರಾಫ್ ಮತ್ತು ಮಗಳು ಕೃಷ್ಣ ಶ್ರಾಫ್. ಟೈಗರ್ ಶ್ರಾಫ್ ಬಗ್ಗೆ ಈಗಾಗಲೇ ಗೊತ್ತು. ಆ್ಯಕ್ಷನ್ ಸಿನಿಮಾ ಮೂಲಕವೇ ಎಲ್ಲರನ್ನು ಸೆಳೆದು, ನೃತ್ಯದ ಮೂಲಕ ಮೋಡಿ ಮಾಡುತ್ತಾರೆ. ಆದರೆ, ಇದೇ ಟೈಗರ್ ಶ್ರಾಫ್ ತಂಗಿ ಕೃಷ್ಣ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಗೊತ್ತಿಲ್ಲ ಎಂಬುದಕ್ಕಿಂತ ಅವರು ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಆಗಾಗ ಇಂಟರ್ನೆಟ್ನಲ್ಲಿ ಸೆನ್ಷೆಷನ್ ಕ್ರಿಯೇಟ್ ಮಾಡುವುದು ಅವರ ಖಯಾಲಿ. ಇದೀಗ ಲಿಪ್ಲಾಕ್ ಮೂಲಕ ಸುದ್ದಿಯಲ್ಲಿದ್ದಾರೆ ಕೃಷ್ಣ.
ಹೌದು, ಬಿಕಿನಿ ಫೋಟೋಗಳು, ಹಾಟ್ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತ, ಸದ್ದು ಮಾಡುವ ಕೃಷ್ಣ, ಈ ಸಲ ಪ್ರಿಯಕರ ಇಬಾನ್ ಹೈಮ್ಸ್ ಜತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಆಲಿಂಗಿಸಿಕೊಂಡು ಚುಂಬಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಇಲ್ಲಿಯವರೆಗೂ ಯಾವುದಕ್ಕೂ ಮುಚ್ಚುಮರೆಯಿಲ್ಲದೆ ಅನಿಸಿದ್ದನ್ನು ಹೇಳುವ, ತೋಚಿದ್ದನ್ನು ಮಾಡುವ ವ್ಯಕ್ತಿತ್ವ ಕೃಷ್ಣ ಅವರದ್ದು. ಮನೆಯಿಂದಲೂ ಅವರಿಗೆ ಯಾವುದೇ ನಿರ್ಬಂಧವಿಲ್ಲ. ಅಷ್ಟೇ ಅಲ್ಲ ಬಾಸ್ಕೇಟ್ಬಾಲ್ ಪ್ಲೇಯರ್ ಇಬಾನ್ ಹೈಮ್ಸ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಮುಕ್ತವಾಗಿ ಹೇಳಿಕೊಂಡಿದ್ದರು. ಇದೀಗ ಇಬಾನ್ ಜತೆಗಿನ ಲಿಪ್ಲಾಕ್ ಫೋಟೋಗಳನ್ನು ಹಂಚಿಕೊಂಡು ಸೌಂಡ್ ಮಾಡುತ್ತಿದ್ದಾರೆ.
ಫಿಟ್ನೆಸ್ಗೆ ಸಂಬಂಧಿಸಿದಂತೆ ಎಂಎಂಎ ಮ್ಯಾಟ್ರಿಕ್ಸ್ ಕೋಚಿಂಗ್ ತರಗತಿ ನಡೆಸುವ ಕೃಷ್ಣ, ಸದಾ ಆ ಸಂಬಂಧಿ ಫೋಟೋಸ್ ಮತ್ತು ವಿಡಿಯೋ ತುಣುಕುಗಳನ್ನು ಆಗಾಗ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. (ಏಜೆನ್ಸೀಸ್)