

ಬಾಲಿವುಡ್ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿ ಒಂದು ತಿಂಗಳ ಮೇಲಾಯಿತು. ತೆರೆಮೇಲೆ ಅವರ ಸಿನಿಮಾಗಳು ಬಿತ್ತರವಾಗುತ್ತಿದ್ದರೆ, ಈ ನಟ ಇನ್ನಿಲ್ಲವಾ? ಎಂದು ಅನಿಸುವುದೇ ಇಲ್ಲ. ಪ್ರೇಕ್ಷಕನ ಎದೆಯಲ್ಲಿ ಆ ಮಟ್ಟಿಗಿನ ಛಾಪನ್ನು ಅಚ್ಚೊತ್ತಿ ಬಾರದೂರಿಗೆ ಹೋಗಿದ್ದಾರೆ. ಇರ್ಫಾನ್ ಖಾನ್ ಇಲ್ಲದ ಇಂಥ ಸಂದರ್ಭದಲ್ಲಿ ಆ ಮರ ಸಹ ಅವರ ನೆನಪಿನಲ್ಲಿಯೇ ಕಾಲ ಕಳೆಯುತ್ತಿದೆ.
ಹೌದು, ಇರ್ಫಾನ್ ಖಾನ್ ಪತ್ನಿ ಸುತಾಪಾ ಸಿಕ್ದಾರ್ ಮತ್ತು ಮಗ ಬಬಿಲ್ ಖಾನ್, ತಂದೆಯ ಪ್ರತಿಯೊಂದು ನೆನಪುಗಳನ್ನು ತುಂಬ ಕಾಳಜಿಯಿಂದ ಮುತುವರ್ಜಿವಹಿಸಿ ಜೋಪಾನ ಮಾಡುತ್ತಿದ್ದಾರೆ. ಆ ನೆನಪುಗಳ ಪೈಕಿ, ಮನೆ ಆವರಣದಲ್ಲಿ ಇರ್ಫಾನ್ ನೆಟ್ಟ ಗಿಡವೂ ಒಂದು. 2016, ಜೂನ್ 5ರಂದು ನೆಟ್ಟ ಸಸಿ ಇದೀಗ ಮರವಾಗಿ ಬೆಳೆದುನಿಂತಿದೆ. ವಿಶ್ವ ಪರಿಸರ ದಿನದ ಪ್ರಯುಕ್ತ ಆ ಮರದ ಫೋಟೋ ಶೇರ್ ಮಾಡಿಕೊಂಡಿರುವ ಸುತಾಪಾ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಯ್ಯೋ ನಯನತಾರಾ ಮದುವೆ ಇಷ್ಟೊಂದು ಸರಳವಾ!?
‘ಎಂಥ ಅದ್ಬುತವಾದ ಉಡುಗೊರೆ ಕೊಟ್ಟು ಹೋಗಿದ್ದೀಯಾ! ನೀನು ಹೋದಮೇಲೂ ನೀನು ಇಲ್ಲೇ ಇರುವಂತೆ ಭಾಸವಾಗುತ್ತಿದೆ. ಈ ಮರ ನೋಡಿದ ಮೇಲೆ’ ಎಂದಿದ್ದಾರೆ ಸುತಾಪಾ. ಅಂದಹಾಗೆ, ಈ ಮರ ಇರುವುದು ಉತ್ತರಖಂಡದ ಕಲಾದುಂಗಿ ಊರಲ್ಲಿ. ಅಲ್ಲಿನ ಅಹಾನಾ ರೆಸಾರ್ಟ್ನಲ್ಲಿ ಇರ್ಫಾನ್ ಈ ಮರವನ್ನು ನೆಟ್ಟಿದ್ದರು. (ಏಜೆನ್ಸೀಸ್)