ಸೆಲೆಬ್ರಿಟಿಗಳು ಅಭಿಮಾನಿಗಳನ್ನು ನಿಯಂತ್ರಿಸಬೇಕು; ಇನ್ಮುಂದೆ ಯಾವುದೇ ಸಿನಿಮಾಗೆ ಟಿಕೆಟ್​ ದರ ಹೆಚ್ಚಿಸಲ್ಲ: ಸಿಎಂ ರೇವಂತ್​ ರೆಡ್ಡಿ | Revanth Reddy

dk (36) (1)
Published on

ಹೈದರಾಬಾದ್​: ಸಂಧ್ಯಾ ಥಿಯೇಟರ್​​ ಕಾಲ್ತುಳಿತದ ಪ್ರಕರಣದ ವಿವಾದದ ನಡುವೆ ತೆಲುಗು ನಿರ್ಮಾಪಕರು, ನಿರ್ದೇಶಕರು ಮತ್ತು ಕೆಲ ಚಿತ್ರ ನಟರು ಸೇರಿದಂತೆ ಸಿನಿ ನಿಯೋಗ ಗುರುವಾರ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ( Revanth Reddy) ಭೇಟಿ ಮಾಡಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಸಿಎಂ ರೇವಂತ್​ರೆಡ್ಡಿ ಮಾತನಾಡಿ, ನಮ್ಮ ಸರ್ಕಾರ ತೆಲುಗು ಚಲನಚಿತ್ರಗಳ, ನಿರ್ಮಾಪಕರ ಮತ್ತು ನಟರ ಪರ ಇದೆ. ಆದರೆ, ಅಭಿಮಾನಿಗಳನ್ನು ನಿಯಂತ್ರಿಸುವ ಜವಬ್ದಾರಿಯನ್ನು ಸೆಲಿಬ್ರಿಟಿಗಳು ಹೊಂದಿರಬೇಕು. ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ನಿಯೋಗಕ್ಕೆ ಖಡಕ್​​ ಆಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರವು ಬೆನಿಫಿಟ್​ ಶೋಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ ಸಿಎಂ, ಇನ್ನುಂದೆ ಬಿಡುಗಡೆಯಾಗುವ ಸಿನಿಮಾಗಳಿಗೆ ಟಿಕೆಟ್​ ದರ ಹೆಚ್ಚಿಸುವುದಿಲ್ಲ ಎಂದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಾದ ರಾಮ್​ಚರಣ್​ರ ಗೇಮ್​ ಚೆಂಚರ್​,ಬಾಲಕೃಷ್ಣ ಅವರ ಡಾಕು ಮಹಾರಾಜ್​ ಮತ್ತು ವೆಂಕಟೇಶ್​ ನಟನೆಯ ಸಾಂಕ್ರತಿಕಿ ವಸ್ತುನ್ನಾ ಚಿತ್ರಗಳಿಗೆ ಈ ನಿರ್ಧಾರದಿಂದ ನಿರಾಸೆಯಾಗಿದೆ.

ಸಭೆಯಲ್ಲಿ ನಿರ್ಮಾಪಕರಾದ ಅಲ್ಲು ಅರವಿಂದ್​, ಸುರೇಶ್​ ದಗ್ಗುಬಾಟಿ, ಸುರೇಶ್​ ನಾರಂಗ್, ಸುಪ್ರಿಯಾ, ನಾಗ ವಂಶಿ ಮತ್ತು ಪುಷ್ಪ-2 ಚಿತ್ರ ನಿರ್ಮಾಪಕ ನವೀನ್​ ಯರ್ನೇನಿ ಮತ್ತು ರವಿಶಂಕರ್​ ನಟರಾದ ನಾಗರ್ಜುನ್​, ವೆಂಕಟೇಶ್​, ನಿತಿನ್​, ವರುಣ್​ ತೇಜ್​, ಸಿದ್ದು ಜೊನ್ನಲಗಡ್ಡ ಮತ್ತು ಶಿವ ಬಾಲಾಜಿ ಸೇರಿ ಇತರರು ಭಾಗವಹಿಸಿದ್ದರು,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net