ಕಾಡುಮೊಲದ ಮಾಂಸ ಕತ್ತರಿಸುವಾಗ ಟಿಕ್​ಟಾಕ್​ ಮಾಡಿ ಸಿಕ್ಕಿಬಿದ್ದ ಬೇಟೆಗಾರರು

rabbit indian hare_web
Published on

ತುಮಕೂರು: ಕಳ್ಳರು ಅದೆಷ್ಟೇ ಚಾಲಾಕಿಯಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳ್ತಾರೆ ಎಂಬ ಮಾತಿಗೆ ಈ ಪ್ರಕರಣವೇ ಸಾಕ್ಷಿ. ಟಿಕ್​ಟಾಕ್ ​ಗೀಳು ಈಗಾಗಲೇ ಹಲವರ ಸಾವು-ನೋವಿಗೂ ಕಾರಣವಾಗಿದೆ. ಈಗ ಇದೇ ಟಿಕ್​ಟಾಕ್​, ಮಾಂಸಕ್ಕಾಗಿ ಕಾಡುಮೊಲವನ್ನು ಕೊಂದಿದ್ದ ಬೇಟೆಗಾರರಿಬ್ಬರನ್ನು ಕಂಬಿ ಎಣಿಸುವಂತೆ ಮಾಡಿದೆ!

ಹೌದು, ಇಂತಹದೊಂದು ಪ್ರಕರಣ ಕೊರಟಗೆರೆ ತಾಲೂಕಿನ ಕರಿದುಗ್ಗನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಕಾಡುಮೊಲವನ್ನು ಕೊಂದ ಆರೋಪಿಗಳು ಅದರ ಚರ್ಮ ಸುಲಿದು, ಮಾಂಸ ಕತ್ತರಿಸುವಾಗ ಟಿಕ್​ಟಾಕ್​ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಕೂಡಲೇ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಕರಿದುಗ್ಗನಹಳ್ಳಿಯ ವಿನಯ ಮತ್ತು ಎಸ್​. ಗೊಲ್ಲಹಳ್ಳಿಯ ಜಿ.ಪಿ. ವಿನಯ್​ ಕುಮಾರ್​ನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net