ಚಿಕನ್​ ರೋಲ್ ಇಲ್ಲ ಎಂದಿದ್ದಕ್ಕೆ ಹೋಟೆಲ್ ಹುಡುಗರ ರೂಮ್​ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕಿಡಿಗೇಡಿಗಳು!

Fire
Published on

ಬೆಂಗಳೂರು: ಚಿಕನ್​ ರೋಲ್ ಇಲ್ಲ ಎಂದು ಹೇಳಿದ್ದಕ್ಕೆ ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿ ಮಧ್ಯೆ ಗಲಾಟೆ ಆಗಿದ್ದು, ಬಳಿಕ ಗ್ರಾಹಕರು ಹೋಟೆಲ್ ಹುಡುಗರ ರೂಮ್​ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣವೊಂದು ನಡೆದಿದೆ. ನಗರದ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಆರೋಪಿಗಳಾದ ದೇವರಾಜ್ ಹಾಗೂ ಗಣೇಶ ಎಂಬವರನ್ನು ಬಂಧಿಸಿದ್ದಾರೆ. ಇವರಿಬ್ಬರು ಇನ್ನೊಬ್ಬನೊಂದಿಗೆ ನಿನ್ನೆ ತಡರಾತ್ರಿ ಸುಮಾರಿಗೆ ಹನುಮಂತನಗರದ ಹೋಟೆಲೊಂದಕ್ಕೆ ಹೋಗಿದ್ದರು. ಆಗ ಚಿಕನ್​ ರೋಲ್ ಕೇಳಿದ್ದಕ್ಕೆ ಇಲ್ಲ ಎಂದಿದ್ದರಿಂದ ಇವರು ಹಾಗೂ ಹೋಟೆಲ್ ಸಿಬ್ಬಂದಿ ಮಧ್ಯೆ ಗಲಾಟೆ ನಡೆದಿದೆ.

ಈ ವೇಳೆ ಹೋಟೆಲ್ ಸಿಬ್ಬಂದಿ ಗ್ರಾಹಕರಿಗೆ ಹೊಡೆದು ಕಳುಹಿಸಿದ್ದರು ಎನ್ನಲಾಗಿದೆ. ನಂತರ ಈ ಮೂವರು ಸಮೀಪದ ದೇವೇಗೌಡ ಪೆಟ್ರೋಲ್ ಬ್ಯಾಂಕ್​ಗೆ ತೆರಳಿ ಪೆಟ್ರೋಲ್ ಖರೀದಿಸಿದ್ದರು. ಅದನ್ನು ತಂದು ಹೋಟೆಲ್ ಪಕ್ಕ ಇದ್ದ ಸಿಬ್ಬಂದಿಯ ರೂಮ್​ನತ್ತ ತೆರಳಿದ ಇವರು ಬಾಗಿಲು-ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net