ಸೇಡು ತೀರಿಸಿಕೊಳ್ಳಲು ಜೀವಂತ ಹಾವಿನ ತಲೆ ಕಡಿದು ತುಂಡರಿಸಿದ ಯುವಕ: ಮೂವರ ಬಂಧನ

Tamil Nadu Youth
Published on

ಚೆನ್ನೈ: ಜೀವಂತ ಹಾವಿನ ತಲೆಯನ್ನು ಕಡಿದು, ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೂವರು ಯುವಕರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಯಿನೂರು ಮೂಲದ ಮೋಹನ್​, ಸೂರ್ಯ ಮತ್ತು ಸಂತೋಷ್​ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಪರಿಸರ ಪ್ರೇಮಿಗಳ ಗುಂಪು ತಮಿಳುನಾಡು ಅರಣ್ಯ ಇಲಾಖೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಮೋಹನ್ ಕೈಗೆ ಹಾವು ಕಚ್ಚಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಹಾವನ್ನು ಕೊಲ್ಲಲು ಮುಂದಾಗಿದ್ದಾಗಿ ಯುವಕರು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇನ್ನಿಬ್ಬರು ಯುವಕರು ಹಾವನ್ನು ಬಿಡುವಂತೆ ಮೋಹನ್‌ಗೆ ಕೇಳಿಕೊಂಡರೂ ಆತ ಕೇಳಲಿಲ್ಲ. ನಂತರ ಹಾವಿನ ತಲೆಯನ್ನು ಕಚ್ಚಿ, ತುಂಡರಿಸಿದ್ದಾರೆ. ಹಾವಿನ ಕತ್ತರಿಸಿದ ತಲೆ ಮತ್ತು ದೇಹದ ದೃಶ್ಯಗಳನ್ನು ಚಿತ್ರೀಕರಿಸಿದಾಗ ಯುವಕರು ನಗುವುದನ್ನು ವಿಡಿಯೋದಲ್ಲಿ ಕೇಳಬಹುದು.

ಈ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಡು ಪ್ರಾಣಿಗಳಿಗೆ ಕಿರುಕುಳ ನೀಡಿ ಸಾವಿಗೆ ಕಾರಣವಾದ ಆರೋಪವನ್ನು ಮೂವರ ಮೇಲೆ ಹೊರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net