ಮಗಳಿಗಾಗಿ 77 ಕೆಜಿ ಕಳೆದುಕೊಂಡ ತಂದೆ; ಆಕೆಯ ದುಃಖ ಭರಿತ ಮುಖ ಜೀವನವನ್ನೇ ಬದಲಿಸಿತು!

weight loss (1)
Published on

ಕೆನಡಾ: ಬಹಳಷ್ಟು ಜನರು ತೂಕ ಇಳಿಸಿಕೊಂಡು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕರಿಗೆ ತೂಕವನ್ನು ಕಳೆದುಕೊಳ್ಳಲು ಪ್ರೇರಣೆ ಸಿಗುವುದಿಲ್ಲ. ಕೆನಡಾದ ಈ ತಂದೆ ಮಗಳು ಆಟದ ಮೈದಾನದಲ್ಲಿ ಹೇಳಿದ್ದ ಮಾತಿನಿಂದಾಗಿ ಬರೋಬ್ಬರಿ 77 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು.‘

ಕೆನಡಾ ದೇಶದ ಆಲ್ಬರ್ಟಾದ ಕ್ಲಾರೆಶೋಲ್ಮ್ ಪಟ್ಟಣದ ನಿವಾಸಿ ಡೇವ್ ಮರ್ಫಿ, ಐದು ವರ್ಷಗಳ ಹಿಂದೆ ತಮ್ಮ ನಾಲ್ಕು ವರ್ಷ ವಯಸ್ಸಿನ ಮಗಳು ಅವರೊಂದಿಗೆ ಆಟದ ಮೈದಾನದಿಂದ ಮನೆಗೆ ರೇಸ್​ ಮಾಡಲು ಬಯಸಿದ್ದಳು.

ಆದರೆ ಆ ಸಂದರ್ಭದಲ್ಲಿ ಅವರು 181 ಕೆಜಿ ತೂಕವನ್ನು ಹೊಂದಿದ್ದರು. ಅದಲ್ಲದೇ ಅಪಘಾತದಿಂದಾಗಿ ಅವರ ಎಡಗಾಲಿನಲ್ಲಿ ಅರ್ಧ ಸ್ನಾಯು ಮಾತ್ರ ಇತ್ತು. ಆದ್ದರಿಂದ, ತಮ್ಮ ಮಗಳಿಗೆ, "ನನ್ನನ್ನು ಕ್ಷಮಿಸು, ನನ್ನಿಂದ ಓಡಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆ" ಎಂದಿದ್ದರು. ಇದರಿಂದಾಗಿ ಮಗಳ ಮುಖದಲ್ಲಿನ ದುಃಖ ಇವರಿಗೂ ತಾಗಿದೆ. ಹೀಗಾಗಿ ಅವರು ತಮ್ಮ ತೂಕವನ್ನು ಇಳಿಸಲು ನಿರ್ಧಾರ ತೆಗೆದುಕೊಂಡಿದ್ದರು.

ಈಗ, ಅವರು 77 ಕೆಜಿ ಕಳೆದುಕೊಂಡಿದ್ದಾರೆ. ತೂಕ ಕಳೆದುಕೊಂಡು ಮಗಳೊಂದಿಗೆ ರೇಸ್ ಕೂಡ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net