ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್​ ನ್ಯೂಸ್​ ಕೊಟ್ಟ ನ್ಯಾಯಾಲಯ!

Russia Sisters
Published on

ಮಾಸ್ಕೋ: ಆತ್ಮರಕ್ಷಣೆಗಾಗಿ ಕಾಮುಕ ತಂದೆಯನ್ನು ಕೊಲೆ ಮಾಡಿದ್ದಾಗಿ ವಾದಿಸಿರುವ ಮೂವರು ಸಹೋದರಿಯರನ್ನು ರಷ್ಯಾ ನ್ಯಾಯಾಲಯ ಕೊನೆಗೂ ಅಧಿಕೃತವಾಗಿ "ಸಂತ್ರಸ್ತೆಯರು" ಎಂದು ಪರಿಗಣಿಸಿದೆ.

ಆದರೆ, ಕಾನೂನು ಪರಿಣಿತರು ಹೇಳುವ ಪ್ರಕಾರ ನ್ಯಾಯಾಲಯದ ಈ ಅಚ್ಚರಿಯ ನಡೆಯು ಮೂವರು ಸಹೋದರಿಯರಲ್ಲಿ ಇಬ್ಬರು ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮೂವರು ಸಹೋದರಿಯರಾದ ಕ್ರಿಶ್ಚಿಯನಾ , ಏಂಜಲಿನಾ ಮತ್ತು ಮರಿಯಾ ಖಚತುರ್ಯನ್ 2018ರ ಜುಲೈನಲ್ಲಿ ತಮ್ಮ ತಂದೆ ಮಿಕಾಯಿಲ್​ ಖಚತುರ್ಯನ್​ರನ್ನು ಮಲಗಿದ್ದ ವೇಳೆ ಬರ್ಬರವಾಗಿ ಹತ್ಯೆ ಮಾಡಿದ್ದರು. ಹದಿಹರೆಯದ ವಯಸ್ಸಿನಲ್ಲಿಯೇ ಸಹೋದರಿಯರು ಈ ಕೃತ್ಯ ಎಸಗಿದ್ದರು. ನಿರಂತರ ಲೈಂಗಿಕ ಕಿರುಕುಳ ಸಹಿಸಲಾಗದೇ ಕೊಲೆ ಮಾಡಿದ್ದಾಗಿ ಸ್ವತಃ ಸಹೋದರಿಯರೇ ಒಪ್ಪಿಕೊಂಡಿದ್ದರು.

ಮೂವರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿತ್ತು. ಆದರೆ, ಮಾಸ್ಕೋ ಜನರ ಆಕ್ರೋಶದಿಂದ ಅಲ್ಲಿನ ಪ್ರಾಸಿಕ್ಯೂಟರ್ ಕಚೇರಿಯು ಪ್ರಕರಣವನ್ನು ಜನವರಿಯಲ್ಲಿ ಕೈಬಿಟ್ಟು, ಆತ್ಮ ರಕ್ಷಣೆಗಾಗಿ ಕೊಲೆ ಅನಿವಾರ್ಯ ಎಂದು ತೀರ್ಪು ನೀಡಿತ್ತು. ಆದಾಗ್ಯೂ ಕೋರ್ಟ್​ ನೀಡಿದ ತೀರ್ಪನ್ನು ರಷ್ಯಾದ ತನಿಖಾ ಸಮಿತಿ ಅಂದಿನಿಂದಲೂ ತಿರಸ್ಕರಿಸುತ್ತಾ ಬಂದಿತ್ತು. ಕಾರಣ ಕ್ರಿಶ್ಚಿಯನಾ ಮತ್ತು ಏಂಜಲಿನಾ ಕೊಲೆ ನಡೆದ ಸಂದರ್ಭದಲ್ಲಿ 19 ಮತ್ತು 18ನೇ ವಯಸ್ಸಿನವರಾಗಿದ್ದರಿಂದ. ವಯಸ್ಕರು ಎಂದು ಪರಿಗಣಿಸಲಾಗಿದೆ.

ಆದರೆ, ಹೊಸ ಮರಣೋತ್ತರ ವಿಚಾರಣೆಯಲ್ಲಿ ರಷ್ಯಾದ ಪ್ರಬಲ ತನಿಖಾ ಸಮಿತಿಯು ಸಹೋದರಿಯರನ್ನು ಸಂತ್ರಸ್ತೆಯರು ಎಂದು ಪರಿಗಣಿಸಿದೆ. ಈ ನಡೆಯನ್ನು ಸಹೋದರಿಯರ ಪರ ವಕೀಲೆ ಮರಿಯಾ ಡಾವ್ಟೈನ್​ ಸ್ವಾಗತಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಕೀಲೆ, ನಿಜವಾಗಿಯು ಅವರು ಸಂತ್ರಸ್ತೆಯರು. ಅವರ ಮೇಲೆ ಹೀನಾಯ ಕೃತ್ಯಗಳನ್ನು ಎಸಗಲಾಗಿದೆ. ಆರೋಪಿ ತಂದೆ ತನಗೆ ಬೇಕಾದನ್ನು ಮಕ್ಕಳಿಂದ ಬಲವಂತವಾಗಿ ಮಾಡಿಸಿದ್ದಾನೆ. ಹೀಗಾಗಿ ಅವರು ಈ ಪ್ರಕರಣದಲ್ಲಿ ಬಲಿಪಶುಗಳೇ ಎಂದು ಹೇಳಿದ್ದಾರೆ.

ಆದರೆ, ಈ ಪ್ರಕರದಲ್ಲಿ ಇಬ್ಬರು ಸಹೋದರಿಯರು ಮಾತ್ರ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಏಕೆಂದರೆ ಇಬ್ಬರು ರಷ್ಯಾದ ಕಾನೂನಿನಡಿಯಲ್ಲಿ ತಮ್ಮ ತಂದೆಯನ್ನು ಕೊಲ್ಲುವಲ್ಲಿ 'ಆತ್ಮರಕ್ಷಣೆ'ಯಲ್ಲಿ ವರ್ತಿಸುವ ಸಾಧ್ಯತೆ ಇಲ್ಲ ಎಂದು ಕಾನೂನು ತಜ್ಞ ವ್ಯಾಲೆಂಟಿನ್ ಕ್ಲೈಚಾರ್ಯೋವ್ ಹೇಳಿದ್ದಾರೆ. ಸದ್ಯ ಪ್ರಕರಣ ಇನ್ನು ವಿಚಾರಣೆಯ ಹಂತದಲ್ಲಿದೆ.

ಘಟನೆ ಹಿನ್ನೆಲೆ ಏನು?

2018ರ ಜುಲೈನಲ್ಲಿ ಮೂವರು ಸಹೋದರಿಯರು ಸೇರಿ ಮಲಗಿದ್ದ ತಂದೆಯ ಮೇಲೆ ಚಾಕು, ಸುತ್ತಿಗೆ ಮತ್ತು ಮೆಣಸಿನ ಪುಡಿಯಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಬಳಿಕ ನಿರಂತರವಾಗಿ ನಮಗೆ ಲೈಂಗಿಕ ತೊಂದರೆ ನೀಡುತ್ತಿದ್ದರು. ತೀರಾ ಕೆಟ್ಟದ್ದಾಗಿ ನಮ್ಮ ಜತೆ ನಡೆದುಕೊಳ್ಳುತ್ತಿದ್ದರು. ಇದನ್ನು ಸಹಿಸಲಾಗದೇ ಸ್ವ ರಕ್ಷಣೆಗಾಗಿ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದರು.

ವರದಿಯೊಂದರ ಪ್ರಕಾರ ಮೂವರು ಸಹೋದರಿಯರ ತಂದೆ ಅವರನ್ನು ತನ್ನ ಮುಂದೆ ಸಂಪೂರ್ಣ ಬೆತ್ತಲಾಗುವಂತೆ ಹೇಳುತ್ತಿದ್ದನಂತೆ. ಏಕೆಂದು ಕೇಳಿದರೆ ನಿಮ್ಮನ್ನು ಚೆಕ್​ ಮಾಡಬೇಕು ಎನ್ನುತ್ತಿದ್ದನಂತೆ. ಬಳಿಕ ಹಸ್ತಮೈಥುನ ಮಾಡುವಂತೆ ಅವರಿಗೆ ಆದೇಶಿಸುತ್ತಿದ್ದಲ್ಲದೆ, ವಿವಿಧ ಶಸ್ತ್ರಾಸ್ತ್ರಗಳಿಂದ ಅವರನ್ನು ಹೆದರಿಸಿ ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಎಂಬುದು ವರದಿಯಲ್ಲಿದೆ. ಈ ಬಗ್ಗೆ ಸಹೋದರಿಯರು ದೂರು ನೀಡಿದರು ಅದನ್ನು ಅಲ್ಲಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವೆಂಬ ಆರೋಪವು ಇದೆ.

ನಿಮ್ಮ ತಾಯಿಯ ಸ್ಥಾನದಲ್ಲಿ ನಿಮ್ಮನ್ನು ಇಡುತ್ತೇನೆ. ನಿಮ್ಮನ್ನು ಮದುವೆಯಾಗುತ್ತೇನೆ. ನಿಮಗೆಲ್ಲಾ ಮಗುವನ್ನು ಕೊಡುತ್ತೇನೆಂದು ಹೇಳುತ್ತಿದ್ದ ಎಂದು ಸಹೋದರಿಯರೇ ತಂದೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net