More

    ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿಗಳ ದುರಂತ ಸಾವು: ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ!

    ನವದೆಹಲಿ: ಸುರಕ್ಷತೆಗೆಂದು ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಸಲಾಕೆ ಮುರಿದು ಕಿಕ್ಕಿರಿದು ತುಂಬಿದ್ದ ಮಹಡಿಯಿಂದ ಕೆಲ ಯುವಕ/ಯುವತಿಯರು ದಾರುಣವಾಗಿ ಮೃತಪಟ್ಟ ಮನ ಕದಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಘಟನೆ ಅಸ್ಸಾಂ ಗುವಾಹಾಟಿಯಲ್ಲಿ ನಡೆದಿದೆ ಎಂದು ವೈರಲ್​ ವಿಡಿಯೋ ಕುರಿತು ಹೇಳಾಗಿದೆ.

    ಫೇಸ್​ಬುಕ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದು, 4ನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆ ಗುವಾಹಾಟಿಯಲ್ಲಿ ನಡೆದಿದೆ. ಜನಜಂಗುಳಿ ಪ್ರದೇಶದಲ್ಲಿ ಎಚ್ಚರದಿಂದಿರಿ. ಅಲ್ಲಾಹನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಅಡಿಬರಹ ಬರೆಯಲಾಗಿದೆ. ಇದು ನಿಜ ಎಂದು ನಂಬಿ ಅನೇಕರು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

    ಈ ಘಟನೆ ಗುವಾಹಾಟಿಯಲ್ಲೇ ನಡೆದಿದೆ ಎಂಬುದು ಎಷ್ಟು ಸತ್ಯ ಎಂಬುದನ್ನು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್ ನಡೆಸಿದಾಗ ಘಟನೆಯ ಅಸಲಿಯತ್ತು ಕಂಡುಬಂದಿದೆ. ಅಂದಹಾಗೆ ಈ ಭಯಾನಕ ಘಟನೆ ನಡೆದಿದ್ದು, ಗುವಾಹಾಟಿಯಲ್ಲಲ್ಲ. ಬದಲಾಗಿ ದಕ್ಷಿಣ ಅಮೆರಿಕಾದ ಬೊಲಿವಿಯಾ ದೇಶದ ಪಬ್ಲಿಕ್​ ಯೂನಿವರ್ಸಿಟಿ ಆಫ್​ ಎಲ್ ಅಲ್ಟೋದಲ್ಲಿ ನಡೆದಿರುವುದು ತಿಳಿದುಬಂದಿದೆ.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಹುಡುಕಾಡಿದಾಗ ಘಟನೆ ಸಂಬಂಧ ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಪತ್ತೆಯಾಯಿತು. ಈ ದುರಂತ ಘಟನೆ 2021ರ ಮಾರ್ಚ್​ 2ರಂದು ಬೊಲಿವಿಯಾದ ಪಬ್ಲಿಕ್​ ಯೂನಿವರ್ಸಿಟಿ ಆಫ್​ ಎಲ್​ ಅಲ್ಟೋದ ಹಣಕಾಸು ವಿಜ್ಞಾನ ಕಟ್ಟಡದಲ್ಲಿ ನಡೆದಿರುವುದಾಗಿ ದಿ ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ. ಅಸೆಂಬ್ಲಿಗಾಗಿ ವಿದ್ಯಾರ್ಥಿಗಳು ಉಪನ್ಯಾಸ ಸಭಾಂಗಣವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ದಿ ಸನ್​ ಮಾಧ್ಯಮ ವರದಿಯ ಪ್ರಕಾರ ಸುಮಾರು 7 ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟರೆ, ಕೆಲವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

    ವೈರಲ್​ ವಿಡಿಯೋದಲ್ಲಿ ಹೇಳಿದಂತೆ ಇಂತಹ ಯಾವುದೇ ಘಟನೆ ಅಸ್ಸಾಂ ಗುವಾಹಾಟಿಯಲ್ಲಿ ನಡೆದಿಲ್ಲ. ಒಂದು ವೇಳೆ ನಡೆದಿದ್ದರೆ, ಇದು ದೇಶಾದ್ಯಂತ ಭಾರಿ ಸುದ್ದಿಯಾಗಿರುತ್ತಿತ್ತು. ಆದರೆ, ಇಂತಹ ಯಾವುದೇ ವರದಿಗಳು ದೇಶಿಯ ಮಾಧ್ಯಮಗಳಲ್ಲಿ ಪತ್ತೆಯಾಗಿಲ್ಲ. ಅಲ್ಲಿಗೆ ತಿಳಿಯುವುದೇನೆಂದರೆ ಈ ಘಟನೆ ಗುವಾಹಾಟಿ ಬದಲಾಗಿ ಬೋಲಿವಿಯಾದಲ್ಲಿ ನಡೆದಿದೆ. (ಏಜೆನ್ಸೀಸ್​)

    ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!

    ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?

    ‘ಅದ್ಧೂರಿ ಲವರ್’ ಚಿತ್ರಕ್ಕಾಗಿ ಜಗಳಗಂಟಿಯಾದ ಸಂಜನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts