ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!

Odisha Man
Published on

ಭುವನೇಶ್ವರ್​: ಪೈಶಾಚಿಕ ಕೃತ್ಯವೊಂದರಲ್ಲಿ ತಾಳಿ ಕಟ್ಟಿದ ಧರ್ಮ ಪತ್ನಿಯನ್ನೇ ವೇಶ್ಯಾವಾಟಿಕೆಗೆ ನೂಕಿದ ಪಾಪಿ ಪತಿ, ಇಷ್ಟಕ್ಕೆ ಸುಮ್ಮನಾಗದೇ ವೇಶ್ಯಾವಾಟಿಕೆ ಮುಂದುವರಿಸಲು ಪತ್ನಿ ಒಪ್ಪದಿದ್ದಾಗ ಆಕೆಯ ಜನನಾಂಗಕ್ಕೆ ಮದ್ಯದ ಬಾಟಲಿಯನ್ನು​ ಸೇರಿಸಿ ಮೃಗೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಕಂಧಮಾಲ್​ ಜಿಲ್ಲೆಯ ತಮುದಿಬಂಧ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೇಂದ್ರಪರಾ ಜಿಲ್ಲೆಯ ಪಟ್ಟಮುಂಡೈ ಗ್ರಾಮದ ಚಂದನ್ ಆಚಾರ್ಯ ಎಂಬಾತನನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ವಾಸವಿದ್ದಾರೆ. ​

ಮದುವೆ ಆದ ಎರಡು ವರ್ಷಗಳ ಬಳಿಕ ಚಂದನ್ ಪತ್ನಿಯನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ನೂಕಿದ್ದಾನೆ. ಆ ದಂಧೆಯನ್ನು ತನ್ನ ಮನೆಯಲ್ಲೇ ನಡೆಸುತ್ತಿದ್ದ. ಕಳೆದ ಐದು ದಿನಗಳ ಹಿಂದೆ ಸಂತ್ರಸ್ತೆ ವೇಶ್ಯಾವಾಟಿಕೆ ಮುಂದುವರಿಸಲು ವಿರೋಧಿಸಿದ್ದಾಳೆ.

ಮೊದಲೇ ಪಾನಮತ್ತ ಸ್ಥಿತಿಯಲ್ಲಿದ್ದ ಆರೋಪಿ ಪತಿ, ಪತ್ನಿಯ ಮಾತನ್ನು ಕೇಳಿ ಕೋಪಗೊಂಡು ಆಕೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಬೀಳಿಸಿ, ನಂತರ ಮದ್ಯದ ಬಾಟಲಿಯನ್ನು ಆಕೆಯ ಜನನಾಂಗಕ್ಕೆ ಸೇರಿಸಿದ್ದಾನೆ. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ಸ್ಥಳೀಯರಿಗೆ ಈ ವಿಚಾರ ತಿಳಿದು ತಕ್ಷಣ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆ ಮತ್ತು ಆಕೆಯ 5 ವರ್ಷದ ಮಗಳನ್ನು ರಕ್ಷಿಸಿ, ಆರೋಪಿ ಚಂದನ್​ನನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net