ಅಮೇಜಾನ್ ಉದ್ಯೋಗಿಯ ಭಯಾನಕ ಆತ್ಮಹತ್ಯೆ: ಯೂಟ್ಯೂಬ್​ನಲ್ಲಿ ಹುಡುಕಾಟ, ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​ನೋಟ್​!

Employee
Published on

ಬೆಂಗಳೂರು: ಪ್ರತಿಷ್ಠಿತ ಅಮೇಜಾನ್​​ ಕಂಪನಿಯ ಉದ್ಯೋಗಿ, ಟೀಮ್​ ಲೀಡರ್ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ​ ನಗರದ ಮಹದೇವಪುರದಲ್ಲಿ ನಡೆದಿದೆ.

ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ಅಮೇಜಾನ್ ಟೀಮ್​ ಲೀಡರ್‌. ಆತ್ಮಹತ್ಯೆಗೂ ಮುನ್ನ ಸುಲಭವಾಗಿ ಸಾಯುವುದು ಹೇಗೆ? ಎಂದು ಯೂಟ್ಯೂಬ್​ನಲ್ಲಿ ಹುಡುಕಾಡಿದ್ದಾನೆ. ಈ ವೇಳೆ ಸಿಲಿಂಡರ್​ನಲ್ಲಿ ಬರುವ ಮೊನಾಕ್ಸೈಡ್ ಮೂಲಕ ಸುಲಭವಾಗಿ ಸಾಯಬಹುದು ಎಂದು ಆಯ್ಕೆಯೊಂದನ್ನು ತೋರಿಸಿದೆ.

ಇದಾದ ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಿಲಿಂಡರ್​ನ ಪೈಪ್ ಮೂಗಿಗೆ ಹಾಕಿಕೊಂಡಿದ್ದಾನೆ. ಪೈಪ್ ಮೂಲಕ ಮೊನಾಕ್ಸೈಡ್ ದೇಹದ ಒಳಗೆ ಹೋಗಿ ಜೀವನ್​ ಕೂತಲ್ಲೇ ಭೀಕರವಾಗಿ ಸಾವಿಗೀಡಾಗಿದ್ದಾನೆ.

ಇದಕ್ಕೂ ಮುನ್ನ ಮನೆ ಬಾಗಿಲಿಗೆ ಸೂಚನೆ ಅಂಟಿಸಿದ್ದ ಜೀವನ್​, ಮನೆ ಬಾಗಿಲು ತೆಗೆದ ಕೂಡಲೇ ಕಿಟಕಿಗಳನ್ನು ತೆರೆಯಿರಿ. ಯಾರೂ ಕೂಡ ಲೈಟ್ಸ್ ಆನ್‌ ಮಾಡಬೇಡಿ ಎಂದು ಬರೆದಿದ್ದ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನದ ನಂತರ ಘಟನೆ ಬೆಳಕಿಗೆ ಬಂದಿದೆ.

ಪೋನ್ ರಿಸೀವ್ ಮಾಡದ ಕಾರಣ ಅನುಮಾನಗೊಂಡು ಮನೆಯ ಬಳಿ ಜೀವನ್​ ಸ್ನೇಹಿತರು ಬಂದಿದ್ದರು. ಈ ವೇಳೆ ಮನೆಯ ಬಾಗಿಲಲ್ಲಿ ಅಂಟಿಸಿದ್ದ ಸೂಚನೆ ನೋಡಿ ಅನುಮಾನ ಬಂದು ಒಳಗೆ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ

ಮನೆಯವರು ನನಗೆ ಪೋನ್ ಮಾಡುತ್ತಿಲ್ಲ. ನನ್ನ ಬಗ್ಗೆ ಕೇರ್ ಮಾಡುತ್ತಿಲ್ಲ. ಲೈಫ್ ಬ್ಯೂಟಿಫುಲ್‌ ಆಗಿರಬೇಕು ಎಂದು ಬೀದರ್​ನಿಂದ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ನಾನ್ ಅನ್ಕೊಂಡ ಹಾಗೇ ಏನು ನಡೀತಿಲ್ಲ. ಲೈಪು ತುಂಬಾ ಬೋರಾಗಿದೆ ಎಂದು ಜೀವನ್​ ಡೆತ್ ನೋಟ್ ಬರೆದಿಟ್ಟಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಮಹದೇವಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಡೆತ್​ನೋಟ್​ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net