ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಮೂರು ಅಂತರಾಷ್ಟ್ರೀಯ ಪ್ರಶಸ್ತಿ
ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಶನ್ ಸುಮಿತ್‌ನಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಭಾಗವಹಿಸಿದ್ದು, ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಮಂಗಳೂರು: ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಶನ್ ಸುಮಿತ್‌ನಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಭಾಗವಹಿಸಿದ್ದು, ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆಯ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ತಿಳಿಸಿದರು.
ಬುಧವಾರ ಶ್ರೀನಿವಾಸ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಗ್ಲೋಬಲ್ ಎಕ್ಷಲೆನ್ಸ್ ಅವಾರ್ಡ್ ಇನ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ಪ್ರಶಸ್ತಿ, ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಎಕ್ಸಲೆನ್ಸ್ ಇನ್ ಇಂಡದಸ್ಟ್ರೀ ಇಂಟಿಗ್ರೇಟೆಡ್ ಟೆಕ್ನಿಕಲ್ ಎಜುಕೇಶನ್ ಅವಾರ್ಡ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಅವರಿಗೆ ವಿಷನರಿ ಎಜುಕೇಶನ್ ಲೀಡರ್ ಅವಾರ್ಡ್ ಲಭಿಸಿದೆ. ಇದರೊಂದಿಗೆ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಥೈಲ್ಯಾಂಡಿನಿಂದ ಒಂದು ತಂಡ ಮಂಗಳೂರಿಗೆ ಆಗಮಿಸಲಿದ್ದು, ನಮ್ಮ ಸಂಸ್ಥೆಯಲ್ಲಿ ಎಐ ಆದರಿತ ಕೌಶಲ್ಯ ತರಬೇತಿಯನ್ನು ಪಡೆಯಲಿದ್ದಾರೆ. ಇದು 30 ದಿನಗಳ ಸರ್ಟಿಫಿಕೇಟ್ ಕೋರ್ಸ್ ಆಗಿರಲಿದೆ. ಮಾತ್ರವಲ್ಲ ಇಲ್ಲಿಂದ ಒಂದು ತಂಡ ಥೈಲ್ಯಾಂಡ್‌ಗೆ ಹೋಗಿ ಅಲ್ಲಿ ಅದ್ಯಾಯನ ನಡೆಲಿದೆ ಎಂದರು.
ಇಲ್ಲಿಯ ತನಕ ವಿದೇಶದೊಂದಿಗೆ ಎರಡು ಕಡೆಗಳಲ್ಲಿ ಹೊಂದಾಣಿಕೆಯೊಂದಿಗೆ ಎರಡು ಕಡೆಯ ವಿದ್ಯಾರ್ಥಿಗಳು ಕಲಿಯುವಂತಹ ಅವಕಾಶ ಇರಲಿಲ್ಲ. ಆದರೆ ಇದು ಮೊದಲ ಬಾರಿಗೆ ಈ ಯೋಜನೆಗೆ ಮುಂದಾಗಿದ್ದು, ಇದು ಸಂಸ್ಥೆಗೆ ಹೆಚ್ಚಿನ ಮಹತ್ವ ದೊರೆತಂತಾಗಿದೆ ಎಂದ ಅವರು 2017ರಲ್ಲಿ ಸಂಸ್ಥೆ ಪ್ರಾರಂಭವಾಗಿದ್ದು, ಇಲ್ಲಿಯ ತನಕ ಅಂತರಾಷ್ಟ್ರೀಯ ಮಟ್ಟದ ಯಾವುದೇ ಪ್ರಶಸ್ತಿಗಳು ಬಂದಿರಲಿಲ್ಲ. ಇದೇ ಮೊದಲಬಾರಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದಿದ್ದು, ಸಂಸ್ಥೆಯ ಗೌರವ ಹೆಚ್ಚಾಗಿದೆ ಎಂದರು.
ಶ್ರೀನಿವಾಸ ವಿವಿ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಹಾಗೂ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ಕುಲಸಚಿವ ಡಾ. ಅಜಯ್, ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಉಪಸ್ಥಿತರಿದ್ದರು.