ಸಂಬಂಧಿಕರ ಮನೆಗೆಂದು ಹೋಗಿದ್ದ ನಾಲ್ವರು ಸಹೋದರರಲ್ಲಿ ಮೂವರ ಸಾವು, ಇನ್ನೊಬ್ಬ ನಾಪತ್ತೆ..

death
ಸಾಂದರ್ಭಿಕ ಚಿತ್ರ
Published on

ಒಡಿಶಾ: ಸಂಬಂಧಿಕರ ಮನೆಗೆಂದು ಹೋಗಿದ್ದ ನಾಲ್ವರು ಸಹೋದರರಲ್ಲಿ ಮೂವರು ಸಾವಿಗೀಡಾಗಿದ್ದು, ಇನ್ನೊಬ್ಬ ನಾಪತ್ತೆಯಾಗಿರುವ ಅತ್ಯಂತ ಕರುಣಾಜನಕ ಪ್ರಕರಣವೊಂದು ಸಂಭವಿಸಿದೆ. ಒಡಿಶಾದಲ್ಲಿ ಇಂಥದ್ದೊಂದು ದುರಂತ ನಡೆದಿದೆ.

ಜಾರ್ಖಂಡ್​​ನ ಸಹೋದರರಾದ ರಿಶಿ ಸಾಹು, ಆಯುಷ್ ಸಾಹು, ಕುನಾಲ್ ಸಾಹು ಮತ್ತು ಕೌಶಲ್ ಸಾಹು ತಮ್ಮ ಪಾಲಕರೊಂದಿಗೆ ಒಡಿಶಾದ ರೂರ್ಕೆಲಾದ ಜಿರಿಪಾನಿ ಎಂಬಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು.

ಇಲ್ಲಿಗೆ ಬಂದಿದ್ದ ಸಹೋದರರು ಇಂದು ಮಧ್ಯಾಹ್ನ ಇಲ್ಲಿನ ಕೋಯೆಲ್ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಮೂವರು ನೀರು ಪಾಲಾಗಿ ರಕ್ಷಣೆ ಮಾಡಲಾಯಿತಾದರೂ ಸಾವಿಗೀಡಾಗಿದ್ದರು. ಅವರು ಸಾವಿಗೀಡಾಗಿದ್ದನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ಖಚಿತ ಪಡಿಸಿದ್ದಾರೆ. ಇನ್ನೊಬ್ಬ ಸಹೋದರ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net