

Israel: ಹಮಾಸ್ ಸರ್ಕಾರದ ಸಚಿವಾಲಯ ನಡೆಸಿದ ಸಮೀಕ್ಷೆಯಲ್ಲಿ 2023ರ ಅಕ್ಟೋಬರ್ 7ರಂದು ನಡೆಸಿದ ದಾಳಿಯ ನಂತರ ಗಾಜಾದಲ್ಲಿ ಸಾವಿನ ಸಂಖ್ಯೆ 60,034ಕ್ಕೆ ಏರಿಕೆಯಾಗಿದ್ದು, 145,870 ಜನರು ಗಾಯಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಾಗರಿಕರು ಅಥವಾ ಉಗ್ರಗಾಮಿಗಳು ಎಷ್ಟು ಮಂದಿ ಮೃತಪಟ್ಟಿದ್ದರೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಮಹಿಳೆಯರು ಮತ್ತು ಮಕ್ಕಳು ಸತ್ತವರಲ್ಲಿ ಅರ್ಧದಷ್ಟು ಜನ ಇದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ, ಈ ಸಮೀಕ್ಷೆಯನ್ನು ಇಸ್ರೇಲ್ ತಿರಸ್ಕರಿಸಿದೆ.
ಇಸ್ರೇಲ್ ಉಗ್ರಗಾಮಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಯಾವ ನಾಗರಿಕರಿಗೂ ಸಹ ಹಾನಿಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಸೇನೆ ಎಂದು ತಿಳಿಸಿದೆ. ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ನಾಗರಿಕರ ಸಾವುಗಳಿಗೆ ಹಮಾಸ್ ಕಾರಣ ಎಂದು ಆರೋಪಿಸಿದೆ.
ಕಳೆದ ದಿನ ರಾಕೆಟ್ ಲಾಂಚರ್‌ಗಳು, ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು ಮತ್ತು ಸುರಂಗಗಳು ಸೇರಿದಂತೆ ಹಮಾಸ್ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ಮುಂದುವರೆಸಿದ್ದು, ಸೋಮವಾರದಂದು ಕನಿಷ್ಠ 70 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಗಳು ತಿಳಿಸಿವೆ. ಆಹಾರವನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ ಅರ್ಧಕ್ಕಿಂತ ಹೆಚ್ಚು ಮಂದಿ ಯುದ್ಧದಲ್ಲಿ ಬಲಿಯಾಗಿದ್ದಾರೆ.
ಸೋಮವಾರ ದಕ್ಷಿಣ ಗಾಜಾ ಪಟ್ಟಿಯ ಮೂಲಕ ಹಾದುಹೋಗುತ್ತಿದ್ದ ಟ್ರಕ್ ಬೆಂಗಾವಲು ಪಡೆಯಿಂದ ಜನರು ಸಹಾಯವನ್ನು ಪಡೆಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ತಿಳಿದು ಬಂದಿದೆ.(ಏಜೆನ್ಸೀಸ್)