ಯಾರಿಗೆ ಬಜೆಟ್ ಅರ್ಥ ಆಗಲ್ವೋ ಅವರಿಂದ ಇಂತಹ ಮಾತು ಬರುತ್ತೆ: ಸಚಿವ ಡಾ. ಶರಣಪ್ರಕಾಶ್ ವಾಗ್ದಾಳಿ

ವಿಜಯವಾಣಿ - 2025-03-09T150538.593
Published on

ಕಲಬುರ್ಗಿ: ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ಬಜೆಟ್​ ಅನ್ನು ಟೀಕಿಸಿ ಮಾತನಾಡಿದ ಬಿಜೆಪಿ ನಾಯಕರು, ಇದೊಂದು ಸಮುದಾಯದ ಬಜೆಟ್ ಎಂದಿದ್ದಾರೆ. ಒಂದು ಸಮುದಾಯಕ್ಕೆ ಸೀಮಿತವಾದ ಬಜೆಟ್​ ಎಂಬ ಸಿಟಿ ರವಿ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್​ ಪಾಟೀಲ್ ತಿರುಗೇಟು ನೀಡಿದ್ದಾರೆ.

ಇಂದು ಕಲಬುರಗಿಯಲ್ಲಿ ಮಾತನಾಡಿದ ಸಚಿವರು, "ಬಿಜೆಪಿ ಅವರಿಗೆ ಮಾಡೋಕೆ ಕೆಲಸ ಇಲ್ಲ. ಮೈನಾರಿಟಿ ಅಂದ್ರೆ ಒಬ್ಬರಲ್ಲ, ಜೈನ್, ಕ್ರಿಶ್ಚಿಯನ್ ಹೀಗೆ ಹಲವರು ಬರುತ್ತಾರೆ‌. ಬಜೆಟ್ ಮೆಚ್ಚುವ ವಿವೇಕ ಬಿಜೆಪಿ ಅವರಿಗೆ ಇಲ್ಲ. ಇದರಲ್ಲಿ ಎಲ್ಲಾ ಸಮುದಾಯದವರಿಗೆ ಮಾನ್ಯತೆ ನೀಡಲಾಗಿದೆ. ಬಿಜೆಪಿ ಅವರದ್ದು ರಾಜಕೀಯ ದುರುದ್ದೇಶವಿದೆ" ಎಂದರು.

"ಯಾರಿಗೆ ಬಜೆಟ್ ಅರ್ಥ ಆಗೋದಿಲ್ಲವೋ ಅವರು ಇಂತಹ ಮಾತು ಹೇಳ್ತಾರೆ‌. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಅವರು ಬಜೆಟ್ ಬಗ್ಗೆ ಈ ರೀತಿ ಹೇಳುತ್ತಿದ್ದಾರೆ" ಎಂದು ಕಮಲ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net