ಆಹ್ವಾನ ಪತ್ರಿಕೆ ಕೊಡಲೆಂದು ಬಂದವರು ಮನೆಯಲ್ಲಿದ್ದ 43 ಲಕ್ಷ ರೂಪಾಯಿಯೊಂದಿಗೆ ಪರಾರಿ..!

d;kjfiods
Published on

ಕೋಲಾರ: ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ದರೋಡೆಕೋರರು, ಮನೆಯಲ್ಲಿದ್ದ 43 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಎಂಬುವರಿಗೆ ಸೇರಿದ ಮನೆಯಲ್ಲಿ ದರೋಡೆ ನಡೆದಿದೆ. ಮಂಜುನಾಥ್ ಪತ್ನಿ ಮಮತಾ ಒಬ್ಬರೆ ಮನೆಯಲ್ಲಿದ್ದರು. ಈ ವೇಳೆ ಯಾರೂ ಇಲ್ಲದಿರುವುದನ್ನು ಗಮನಿಸಿರುವ ದರೋಡೆಕೋರರು, ಮದುವೆ ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಯೊಳಗೆ ಬಂದಿದ್ದಾರೆ.

ಮನೆಯಲ್ಲಿದ್ದ ಮಹಿಳೆ ವಿಳಾಸ ಪರಿಚಯ ಕೇಳುವ ಸಂದರ್ಭದಲ್ಲಿ ಮತ್ತು ಬರುವಂತೆ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಮನೆಯಲ್ಲಿದ್ದ ಹಣ, ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಜಮೀನು ಮಾರಾಟದಲ್ಲಿ ಬಂದಿದ್ದ ಸುಮಾರು 43 ಲಕ್ಷ ರೂಪಾಯಿಯನ್ನು ಮನೆಯಲ್ಲಿ ಇಟ್ಟಿದ್ದರು.

ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net