

ಅಮೆರಿಕಾ: ತಾಂತ್ರಿಕ ಅಭಿವೃದ್ಧಿಯನ್ನು ಬಳಸಿಕೊಂಡು ಮನುಷ್ಯ ತನ್ನ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತಿದ್ದಾನೆ. ಮನೆಗೆಲಸ, ಹೊರಗಿನ ಕೆಲಸಗಳನ್ನೆಲ್ಲ ತಂತ್ರಜ್ಞಾನದಿಂದಲೇ ಮುಗಿಸುತ್ತಿದ್ದಾರೆ. ಸ್ವಯಂಚಾಲಿತ ಫ್ಲೋರ್ ಕ್ಲೀನರ್ಗಳಿಂದ ಹಿಡಿದು ಮನೆಯಲ್ಲಿ ಕೆಲಸ ಮಾಡಲು ರೋಬೋಟ್ಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?: ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದಾನೆ. ರೋಬೋಟ್ ಕೂದಲನ್ನು ಕತ್ತರಿಸುತ್ತಿರುವುದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ಕೆಲವು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ವೊಂದು ಪೋಸ್ಟ್ ಮಾಡಿದೆ. ಆದರೆ ಇದೀಗ ವಿಡಿಯೋದ ಒಂದು ಭಾಗ ವೈರಲ್ ಆಗಿದೆ.
ಈ ವೈರಲ್ ವಿಡಿಯೋ ಅಮೆರಿಕದ್ದು ಎಂದು ತಿಳಿದುಬಂದಿದೆ. ಅಮೆರಿಕನ್ ಇಂಜಿನಿಯರ್ ಶೇನ್ ಡಿಸ್ರಪ್ಟ್ ಅವರು ಸ್ವತಃ ನಿರ್ಮಿಸಿದ ವಿಶೇಷ ರೋಬೋಟ್ನೊಂದಿಗೆ ತಮ್ಮ ತಲೆ ಕೂದಲನ್ನು ಕಟ್ ಮಾಡಿಸಿಕೊಂಡಿದ್ದಾರೆ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
'ನಾನು ಇದನ್ನು ಮೊದಲ ತಲೆಮಾರಿನ ಯಂತ್ರವೆಂದು ಪರಿಗಣಿಸುತ್ತೇನೆ, ಕೂದಲು ಕತ್ತರಿಸಲು ಕೆಲವು ವಿಶಿಷ್ಟ ಶೈಲಿಗಳನ್ನು ಆಯ್ಕೆ ಮಾಡಲು ನಾನು ಇನ್ನೊಂದು ಯಂತ್ರವನ್ನು ತಯಾರಿಸಲು ಬಯಸುತ್ತೇನೆ' ಎಂದಿದ್ದಾರೆ. ಆದಾಗ್ಯೂ, ಈ ವಿಡಿಯೋ ಹಳೆಯದಾಗಿದ್ದರೂ ರೆಡ್ಡಿಟ್ನಲ್ಲಿ ಮರು ಶೇರ್ ಮಾಡಲಾಗಿದೆ. ಈ ವಿಡಿಯೋ ಮತ್ತೆ ವೈರಲ್ ಆಗಿದೆ.