

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅನೇಕ ನಟ-ನಟಿಯರು ಜೂನಿಯರ್ ಕಲಾವಿದರಾಗಿ, ಸಹಾಯಕ ನಿರ್ದೇಶಕರಾಗಿ, ಲೈಟ್ ಬಾಯ್, ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಪ್ರಾರಂಭದ ದಿನಗಳನ್ನು ಕಳೆದು, ಇಂದು ದೊಡ್ಡ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಆ ಸಾಲಿನಲ್ಲಿ ದಕ್ಷಿಣ ಭಾರತದ ಅಪ್ರತಿಮ ಕಲಾವಿದ ಕಮಲ್ ಹಾಸನ್ ಕೂಡ ಇದ್ದಾರೆ ಎಂಬುದು ಇದೀಗ ಹಲವರಿಗೆ ತಿಳಿಯದ ಅಚ್ಚರಿ ಸಂಗತಿ!
ಬಾಲಿವುಡ್ ಚಿತ್ರರಂಗದ ದಿಗ್ಗಜ, ನಟ ಅಮಿತಾಬ್ ಬಚ್ಚನ್ ಅವರ ಸೂಪರ್ ಹಿಟ್ 'ಶೋಲೆ' ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕಮಲ್ ಹಾಸನ್ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ತಾವು ಅಭಿನಯದ ಪ್ರತಿಯೊಂದು ಸಿನಿಮಾದಲ್ಲೂ ಅದ್ಬುತವಾಗಿ ನಟಿಸುವ ಮೂಲಕ ಇಂದು ಟಾಲಿವುಡ್ನ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ.
ಇಂದು ಕಮಲ್ ಅವರು ಒಂದು ಚಿತ್ರದಲ್ಲಿ ನಟಿಸಲು ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ಅದೆಷ್ಟೋ ಅಭಿಮಾನಿಗಳಿಗೆ ಮತ್ತು ಚಿತ್ರಪ್ರೀಯರಿಗೆ ಇಂದಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ನಡೆದ ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರದ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಮಲ್ ಹಾಸನ್, ತಾವು ಶೋಲೆ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದನ್ನು ಎಲ್ಲರ ಸಮ್ಮುಖದಲ್ಲಿ ಬಹಿರಂಗಪಡಿಸಿದರು.
ತಮ್ಮ ಆರಂಭ ದಿನಗಳನ್ನು ನೆನಪಿಸಿಕೊಂಡ ನಟ ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಅವರು ತಮ್ಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರ ಬಗ್ಗೆ ಸಂತಸದಿಂದ ಹೇಳಿಕೊಂಡರು. ಈ ವಿಷಯ ತಿಳಿದ ಬಳಿಕ ಕಮಲ್ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ನಿಮ್ಮ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹರಸಿದ್ದಾರೆ, (ಏಜೆನ್ಸೀಸ್).