More

    ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಪ್ರಕರಣ: ಪ್ರಮುಖ ಆರೋಪಿಯ ಮನೆಗೆ ಬೆಂಕಿಯಿಟ್ಟ ಮಹಿಳೆಯರು

    ಇಂಫಾಲ್​: ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿಬರುತ್ತಿದ್ದು, ಇದರ ನಡುವೆಯೇ ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೇಯಿ ಮನೆಗೆ ಬೆಂಕಿ ಇಡಲಾಗಿದೆ.

    ಒಂದು ಗುಂಪಿನ ಜನರು ಅದರಲ್ಲೂ ಮಹಿಳೆಯರೇ ಹೆಚ್ಚಾಗಿದ್ದು, ಪ್ರಮುಖ ಆರೋಪಿಯ ಮನೆಗೆ ಬೆಂಕಿ ಇಟ್ಟು ಭಸ್ಮ ಮಾಡಿದ್ದಾರೆ. ಈ ಘಟನೆ ಗುರುವಾರ (ಜುಲೈ 20) ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಈ ಪ್ರಕರಣ ಸಂಬಂಧ ಗುರುವಾರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ವರಲ್ಲಿ ಹುಯಿರೆಮ್ ಹೆರೋದಾಸ್ ಮೈತೇಯಿಯೇ ಪ್ರಮುಖ ಆರೋಪಿ.

    ಘಟನೆ ಹಿನ್ನೆಲೆ ಏನು?

    ಮೊನ್ನೆ (ಜು.19) ರಾತ್ರಿಯಿಂದ ಟ್ವಿಟರ್​ನಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಮಹಿಳೆಯರಿಬ್ಬರನ್ನು ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ಅಲ್ಲದೆ, ಮಹಿಳೆಯರ ಮೇಲೆ ಗ್ಯಾಂಗ್​ರೇಪ್​ ಸಹ ನಡೆದಿದೆ ಎನ್ನಲಾಗಿದೆ. ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಜುಲೈ 20ರಂದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಪಿಎಚ್‌ಡಿ ಪದವಿ ಪಡೆದ ದಿನಗೂಲಿ ಮಾಡುವ ಮಹಿಳೆ; ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬಹುದು…

    ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್​ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಉಂಟಾಗಿದೆ. ಕಳೆದೆರೆಡು ತಿಂಗಳಿಂದಲೂ ಈ ಘರ್ಷಣೆ ಮುಂದುವರಿದೇ ಇದೆ. ಇದರ ನಡುವೆ ಈ ಭಯಾನಕ ಕೃತ್ಯ ನಡೆದಿದೆ. ಮಣಿಪುರದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದನ್ನು ಪ್ರಧಾನಿ ಮೋದಿ ಸಹ ಖಂಡಿಸಿದ್ದಾರೆ. ಮುಂಗಾರು ಅಧಿವೇಶನದಲ್ಲೂ ಈ ಘಟನೆ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಸುಪ್ರೀಂಕೋರ್ಟ್​ ಸಹ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ಇನ್ನು ಮಣಿಪುರದ ಹಿಂಸಾಚಾರದಲ್ಲಿ ಈವರೆಗೂ 150 ಮಂದಿ ಅಸುನೀಗಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ಬೆತ್ತಲೆ ಮೆರವಣಿಗೆ ಕೇಸ್​: ದೇಶವನ್ನು ರಕ್ಷಿಸಿದ ನನಗೆ ಪತ್ನಿಯನ್ನು ರಕ್ಷಿಸಲಾಗಲಿಲ್ಲ, ನಿವೃತ್ತ ಯೋಧನ ಕಣ್ಣೀರು

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಎಚ್ಚರಿಕೆ

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ಟ್ವಿಟರ್​ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts