More

    ಪಿಎಚ್‌ಡಿ ಪದವಿ ಪಡೆದ ದಿನಗೂಲಿ ಮಾಡುವ ಮಹಿಳೆ; ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬಹುದು…

    ಆಂಧ್ರಪ್ರದೇಶ: ಅನಂತಪುರ ಜಿಲ್ಲೆಯಲ್ಲಿ ಸತತ ಪರಿಶ್ರಮದ ಫಲವಾಗಿ ದಿನಗೂಲಿ ಮಹಿಳೆಯೊಬ್ಬರು ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕೃಷಿ ಜಮೀನಿನಲ್ಲಿ ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಅವರು ಈ ಪದವಿ ಪಡೆಯಲು ಆರು ವರ್ಷಗಳ ಕಾಲ ಶ್ರಮಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಅಂದಹಾಗೆ ಅವರ ಹೆಸರು ಡಾ ಭಾರತಿ.

    ಭಾರತಿ ಮೂವರು ಸಹೋದರಿಯರಲ್ಲಿ ಹಿರಿಯರು. ಮೂವರು ಹೆಣ್ಣು ಮಕ್ಕಳು ಎಂಬ ಕಾರಣಕ್ಕೆ ಅವರ ತಂದೆ ಮಕ್ಕಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಭಾರತಿ ಅವರ ಅಜ್ಜ ಭಾರತಿಯವರನ್ನು ಕರೆದೊಯ್ದು ಅಧ್ಯಯನವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.

    ಇದನ್ನೂ ಓದಿ: ಅಜ್ಜನ ಮಡಿಲಿಂದ ಜಾರಿ ಚರಂಡಿಗೆ ಬಿದ್ದ 6 ತಿಂಗಳ ಮಗು; ಮಗಳಿಗಾಗಿ ಕಾದು ಕೂತ ತಾಯಿ, ಇದು ಹೃದಯ ಕಲಕುವ ಘಟನೆ

    “ಸಾಮಾನ್ಯವಾಗಿ ಹೆಣ್ಣುಮಕ್ಕಳು ಮನೆಕೆಲಸಕ್ಕೆ ಸೀಮಿತವಾಗಬೇಕೆಂದು ನಿರೀಕ್ಷಿಸುವ ಜಗತ್ತಿನಲ್ಲಿ ನನ್ನ ಅಜ್ಜ ನನಗೆ ಓದಲು ಹೇಳಿದರು” ಎಂದು ಭಾರತಿ ನೆನಪಿಸಿಕೊಂಡಿದ್ದಾರೆ. ಆದರೆ ಅವರು ಇನ್ನೂ ಶಾಲೆಯಲ್ಲಿದ್ದಾಗಲೇ ಅಜ್ಜ ನಿಧನರಾದರು. ನಂತರ ಅವರ ವಿವಾಹವಾಯಿತು.
    “ನನ್ನ ಪತಿ ಶಿವಪ್ರಸಾದ್ ಅವರು ನನ್ನ ಅಧ್ಯಯನವನ್ನು ಮುಂದುವರೆಸುವ ಬಗ್ಗೆ ನನಗಿಂತ ಉತ್ಸುಕರಾಗಿದ್ದರು, ಅವರು ಮಹಿಳೆಯರು ಕಷ್ಟ ಮತ್ತು ಬಡತನದಿಂದ ಪಾರಾಗಲು ಶಿಕ್ಷಣವೊಂದೇ ದಾರಿ ಎಂದು ಹೇಳುತ್ತಿದ್ದರು. ಅವರು ನಾನು ಬಯಸಿದಲ್ಲಿ ‘ಏನೇ ಆಗಲಿ’ ಬೆಂಬಲಿಸುವುದಾಗಿ ಹೇಳಿದರು. ಅಂತೆಯೇ ತಮ್ಮ ಮಾತನ್ನು ಉಳಿಸಿಕೊಂಡರು” ಎಂದು ಭಾರತಿ ಹೇಳಿದರು.

    ಇದನ್ನೂ ಓದಿ: ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಯುವತಿ, ಆಮೇಲಾಗಿದ್ದೇನು? 

    ಆದರೆ ಭಾರತಿ ತಮ್ಮ ಕುಟುಂಬವನ್ನು ಪೋಷಿಸಲು ಕೃಷಿ ಕೂಲಿಯಾಗಿ ದುಡಿದರು. ಬಸ್‌ಗಳು ಮತ್ತು ಆಟೋಗಳಲ್ಲಿ, ಕೆಲವೊಮ್ಮೆ ಕಾಲ್ನಡಿಗೆಯಲ್ಲಿ ದೂರದ ಪ್ರಯಾಣ ಮಾಡಿದರು. ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ, ಶಿವಪ್ರಸಾದ್ ಅವರು ಭಾರತಿ ಡಾಕ್ಟರೇಟ್ ಪದವಿ ಪಡೆಯಬೇಕೆಂದು ಬಯಸಿದ್ದರು. ಆರು ವರ್ಷಗಳ ಕಾಲ ಭಾರತಿ ಬೈನರಿ ಲಿಕ್ವಿಡ್ ಮಿಶ್ರಣಗಳ ಸಂಶೋಧನೆ ಕೈಗೊಂಡು, ಅಂತಿಮವಾಗಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಿದರು. ಈ ಮಧ್ಯೆ ಉದ್ಯೋಗ ಪಡೆಯಲು ವಿಫಲರಾದ ಭಾರತಿ ಅವರು ಸ್ಥಳೀಯ ಶಾಸಕರಿಗೆ ಜಗನ್ನಣ್ಣ ಕಲ್ಯಾಣ ಯೋಜನೆಯಡಿ ಮನೆ ನೀಡುವಂತೆ ಮನವಿ ಮಾಡಿದರು. ಆದರೆ ಇದುವರೆಗೆ ಆಕೆಗೆ ಏನೂ ಸಿಕ್ಕಿಲ್ಲ ಎಂದರು.

    ಪಿಎಚ್‌ಡಿ ಪದವಿ ಪಡೆದ ದಿನಗೂಲಿ ಮಾಡುವ ಮಹಿಳೆ; ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬಹುದು…

    ಡಾ.ಭಾರತಿ ಅವರು ಪಿಎಚ್‌ಡಿ ಮಾಡಿದರೂ ಇನ್ನೂ ಕೆಲಸವಿಲ್ಲದೆ ಇರುವುದರಿಂದ ಅವರ ಪತಿ ಈಗ ತಮ್ಮ ಮಗಳಿಗೆ ಶಿಕ್ಷಣ ನೀಡುವುದರಲ್ಲಿ ಏನಾದರೂ ಪ್ರಯೋಜನವಿದೆಯೇ ಎಂದು ಆಶ್ಚರ್ಯಪಡುತ್ತಾರೆ. ಅವಳು 6 ನೇ ತರಗತಿ ಓದುತ್ತಿದ್ದಾಳೆ.

    ಪಾಕ್ ಪ್ರಜೆ ಸೀಮಾ ಹೈದರ್​​​ಗೆ ಭಾರತದ ಪೌರತ್ವ ನೀಡುವಂತೆ ಸಚಿನ್ ತಂದೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts